ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌‌ಡೌನ್ ಲಕನೌ: ರಂಜಾನ್ ತುಂಡೆ ಕಬಾಬ್ ಈ ಬಾರಿ ಇಲ್ಲ, ಗ್ರಾಹಕರಲ್ಲಿ ನಿರಾಸೆ

Last Updated 24 ಏಪ್ರಿಲ್ 2020, 3:39 IST
ಅಕ್ಷರ ಗಾತ್ರ

ಲಕನೌ (ಉತ್ತರ ಪ್ರದೇಶ): ರಂಜಾನ್ ಸಮಯದಲ್ಲಿ ಬಗೆಬಗೆಯ ತಿಂಡಿ ತಿನಿಸುಗಳಿಗೆ ಹೆಸರುವಾಸಿಯಾಗಿದ್ದ ಲಕನೌ ಹೋಟೆಲ್‌‌ಗಳಲ್ಲಿ ಈಗ ಬಾಗಿಲು ಮುಚ್ಚಿದ್ದುಈ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿವೆ. ಈ ವಾರದಿಂದ ರಂಜಾನ್ ಹಬ್ಬ ಆರಂಭವಾಗುತ್ತಿದ್ದು,ಲಾಕ್ ಡೌನ್ ಕಾರಣ ಇಲ್ಲಿ ತಯಾರಿಸಲಾಗುತ್ತಿದ್ದವಿಶ್ವವಿಖ್ಯಾತ ತುಂಡೆ ಕಬಾಬ್, ಗ್ಯಾಲೋಟಿ ಕಬಾಬ್ ಈ ಬಾರಿಗ್ರಾಹಕರಿಗೆ ಲಭ್ಯವಿಲ್ಲದಂತಾಗಿದೆ. ಇದು ಈ ಬಾರಿ ಗ್ರಾಹಕರಲ್ಲಿ ತೀವ್ರ ನಿರಾಸೆಗೆ ಕಾರಣವಾಗಿದೆ.

115 ವರ್ಷಗಳ ಇತಿಹಾಸವಿರುವ ಈ ನಗರದಲ್ಲಿ ಇದೇ ಮೊದಲ ಬಾರಿಗೆ ತುಂಡೆ ಕಬಾಬ್ ತಯಾರಿಸುವ ಇಲ್ಲಿನ ಜನಪ್ರಿಯ ಹೋಟೆಲ್ ಮತ್ತು ರೆಸ್ಟೋರೆಂಟ್‌‌ಗಳು ಮಾಂಸದೊರೆಯದ ಕಾರಣ ಈ ಆಹಾರವನ್ನು ತಯಾರಿಸದಿರುವತೀರ್ಮಾನಕ್ಕೆ ಬಂದಿವೆ.

ಲಕನೌನಲ್ಲಿ ಕೊರೊನಾ ಸೋಂಕು ಹರಡದಂತೆ ಲಾಕ್‌‌ಡೌನ್ ಜಾರಿಯಲ್ಲಿದ್ದು, ಸ್ಥಳೀಯ ಆಡಳಿತ ಮೇ 3ವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಲ್ಲದೆ, ಒಳಬರುವ ಹಾಗೂ ಹೊರ ಹೋಗುವ ವಾಹನಗಳನ್ನುತೀವ್ರ ತಪಾಸಣೆ ನಡೆಸಿ ಮೆಡಿಕಲ್ ಎಮೆರ್ಜೆನ್ಸಿ ಇರುವ ವಾಹನಗಳಿಗಷ್ಟೇ ಅವಕಾಶ ನೀಡಲಾಗುತ್ತಿದೆ. ದೇಶದಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿರುವಂತೆ ಲಕನೌ ನಗರ ಕೂಡ ಈಗ ಸ್ತಬ್ಧವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ಈ ಬಗೆಯ ಆಹಾರವನ್ನು ನೀಡಲು ಸಾಧ್ಯವಾಗದೆ, ಅನಿವಾರ್ಯವಾಗಿ ಇಲ್ಲಿನ ಹೋಟೆಲ್ ಮತ್ತು ರೆಸ್ಟೋರೆಂಟ್‌‌‌ಗಳು ಬಾಗಿಲುಬಂದ್ ಮಾಡಿವೆ.

ಈ ವಾರದಿಂದ ಪವಿತ್ರ ರಂಜಾನ್ ಉಪವಾಸ ಆರಂಭವಾಗುತ್ತದೆ.ಮೇ ಅಂತ್ಯಕ್ಕೆಉಪವಾಸ ಅಂತ್ಯಗೊಳ್ಳಲಿದೆ. ರಂಜಾನ್ ಉಪವಾಸಸಮಯದಲ್ಲಿ ಪ್ರಸಿದ್ಧ ತಿಂಡಿ ತಿನಿಸುಗಳನ್ನು ಇಷ್ಟಪಡುವರಿಗೆ ನಮ್ಮ ರೆಸ್ಟೋರೆಂಟ್ ಸೇವೆ ಒದಗಿಸುತ್ತಿತ್ತು. ಈ ತಿಂಡಿ ತಿನಿಸುಗಳು ಹಾಗೂ ಊಟವನ್ನು ಗ್ರಾಹಕರಿಗೆ ಒದಗಿಸಿಕೊಡುವ ಅವಕಾಶ ಈ ಬಾರಿ ತಪ್ಪಿದ್ದುನೋವಿನ ಸಂಗತಿಯಾಗಿದೆ. ಈಹೋಟೆಲ್ ಮುಚ್ಚಿರುವುದು 115 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು ಎಂದು ರೆಸ್ಟೋರೆಂಟ್ ಮಾಲಿಕಮಹಮದ್ ಉಸ್ಮಾನ್ ಹೇಳುತ್ತಾರೆ. ಇವರ ತಾತ 1905ರಲ್ಲಿ ರೆಸ್ಟೋರೆಂಟ್ ಆರಂಭಿಸಿದ್ದು ಈ ರೆಸ್ಟೋರೆಂಟ್ ವಿಶ್ವ ಪ್ರಸಿದ್ಧ ತುಂಡೆ ಕಬಾಬ್, ಗ್ಯಾಲೊಟಿ ಕಬಾಬ್‌ಗೆ ಖ್ಯಾತಿ ಪಡೆದಿತ್ತು.

ರಂಜಾನ್ ಅವಧಿಯಲ್ಲಿ ಸೂರ್ಯಾಸ್ತದ ನಂತರ ಹಾಗೂ ಸೂರ್ಯೋದಯಕ್ಕೂ ಮುನ್ನ ಆಹಾರ ಸೇವಿಸುವುದು ಪದ್ಧತಿಯಾಗಿದೆ. ಈ ಸಮಯದಲ್ಲಿ ತುಂಡೆ ಕಬಾಬ್‌ಗೆ ಲಕನೌನಲ್ಲಿ ಭಾರಿ ಬೇಡಿಕೆ ಇರುತ್ತಿತ್ತು.ಲಕನೌನಲ್ಲಿ ಈ ಆಹಾರವನ್ನು ತಯಾರಿಸುವುದಕ್ಕೆ ಮಹಮದ್ ಉಸ್ಮಾನ್ ಕುಟುಂಬ ಖ್ಯಾತಿ ಪಡೆದಿದೆ. ಈತಲಕನೌ‌ನಲ್ಲಿ ಸುಮಾರು ಎಂಟು ಶಾಖೆಗಳನ್ನು ಹೊಂದಿದ್ದಾರೆ.ಮಾಮೂಲಿ ದಿನಗಳಲ್ಲಿ ಪ್ರತಿದಿನ 60 ಕೆಜಿ ಮಾಂಸ ಖರ್ಚಾಗುತ್ತಿದ್ದರೆ, ರಂಜಾನ್ ದಿನಗಳಲ್ಲಿ 100 ಕೆಜಿ ಮಾಂಸ ಖರ್ಚಾಗುತ್ತಿತ್ತು. ಇಷ್ಟು ಮಾಂಸವನ್ನು ಸ್ಥಳೀಯ ಏಜೆಂಟರು ಒದಗಿಸುತ್ತಿದ್ದರು.

ಇದನ್ನು ತಯಾರಿಸಲು ರೆಸ್ಟೋರೆಂಟ್‌ನಲ್ಲಿ ಅನುಭವಿ ಬಾಣಸಿಗರು ಇರುತ್ತಿದ್ದರು.ಈಗ ಮಾಂಸ ಸರಬರಾಜು ಮಾಡುವ ಏಜೆಂಟರೂ ಇಲ್ಲ, ಅಡುಗೆ ಮಾಡುವ ಬಾಣಸಿಗರೂ ಇಲ್ಲ. ಲಾಕ್ ಡೌನ್ ಕಾರಣ ಬಾಣಸಿಗರು ತಮ್ಮ ಗ್ರಾಮ ಮತ್ತು ಪಟ್ಟಣಗಳಿಗೆ ತೆರಳಿದ್ದಾರೆ. ಏಜೆಂಟರು ಮಾಂಸ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.ಇದರಿಂದಾಗಿ ಎಲ್ಲಾ ಹೋಟೆಲ್‌ಗಳನ್ನು ಬಂದ್ ಮಾಡಿರುವುದಾಗಿ ಉಸ್ಮಾನ್ ಹೇಳುತ್ತಾರೆ.ರಂಜಾನ್ ಉಪವಾಸ ಮೇ ಅಂತ್ಯದವರೆಗೂ ಇರುತ್ತದೆ. ಆದರೆ, ಮೇ3ರಂದು ಲಾಕ್ ಡೌನ್ ಅಂತ್ಯಗೊಳುತ್ತದೆ ಎನ್ನುತ್ತಾರೆ. ಆದರೆ, ನನ್ನಪ್ರಕಾರ ಲಾಕ್ ಡೌನ್ ತೆರವು ಮಾಡುವ ಯಾವುದೇ ಮುನ್ಸೂಚನೆ ಇಲ್ಲ ಎನ್ನುತ್ತಾರೆಉಸ್ಮಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT