ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಹಂತದ ಚುನಾವಣೆ: ಸತತ ರಜೆ!

Last Updated 10 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 18ರಂದು ಚುನಾವಣೆ ನಡೆಯಲಿದ್ದು, ಈ ದಿನ ನಿಗದಿಪಡಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಚುನಾವಣೆಗೂ ಹಿಂದಿನ ದಿನ ಮಹಾವೀರ ಜಯಂತಿ (ಏ. 17). ಅಂದು ಸರ್ಕಾರಿ ರಜಾದಿನ. ಮರುದಿನ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಾರ್ವತ್ರಿಕ ರಜೆ ನೀಡಲಾಗುತ್ತದೆ.

ಏ.19ರಂದು ‘ಗುಡ್‌ ಫ್ರೈಡೆ’. ಅಂದೂ ಸರ್ಕಾರಿ ರಜೆ. ಏ. 20ರಂದು ‘ಹೋಳಿ ಶನಿವಾರ’ ಆಗಿರುವುದರಿಂದ ಸರ್ಕಾರಿ ನೌಕರರಿಗೆ ಅಂದು ನಿರ್ಬಂಧಿತ ರಜೆ ಪಡೆಯಲು ಅವಕಾಶವಿದೆ. ಶನಿವಾರ, ಭಾನುವಾರ ಬಹುತೇಕ ಐಟಿಬಿಟಿ ಕಂಪನಿಗಳಿಗೆ ರಜೆ ನೀಡಲಾಗುತ್ತದೆ.

ಈ ದಿನಗಳಲ್ಲಿ ಶಾಲಾ–ಕಾಲೇಜುಗಳಿಗೂ ರಜೆ ಇರುವುದರಿಂದ ಅನೇಕರು ಕುಟುಂಬ ಸಮೇತ ಪ್ರವಾಸ ಹೋಗುವ ಸಾಧ್ಯತೆ ಇರುತ್ತದೆ. ಇದು ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ‘ಮತದಾರರ ವೇದಿಕೆ’ಯ ವೀಣಾಪಾಣಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT