ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡ ಸಂಸದೀಯ ಸಮಿತಿ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಕಳೆದ ನಾಲ್ಕು ವರ್ಷಗಳಲ್ಲಿ ಉಗ್ರರು ನಡೆಸಿದ ಗಡಿ ನುಸುಳುವಿಕೆಯ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದ್ದೇವೆ’ ಎಂದು ಗೃಹ ಸಚಿವಾಲಯ ನೀಡಿರುವ ಮಾಹಿತಿಗೆ ಸಂಸದೀಯ ಸಮಿತಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ನಂಬಲು ಸಾಧ್ಯವೇ ಇಲ್ಲದ ದತ್ತಾಂಶಗಳನ್ನು ನೀಡಬೇಡಿ’ ಎಂದು ಸಮಿತಿಯು ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.

ಗಡಿ ಭದ್ರತೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಗೃಹ ಸಚಿವಾಲಯ ನೀಡಿದ್ದ ವರದಿಯನ್ನು ಪಿ.ಚಿದಂಬರಂ ನೇತೃತ್ವದ ಗೃಹ ವ್ಯವಹಾರಗಳ ಸಂಸ
ದೀಯ ಸಮಿತಿ ಪರಿಶೀಲನೆ ನಡೆಸಿತ್ತು.

‘ಗಡಿ ನುಸುಳುವಿಕೆಯ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದ್ದೇವೆ ಎಂದು ನೀವು ಮಾಹಿತಿ ನೀಡಿದ್ದೀರಿ. ಅದು ನಿಜವೇ ಆಗಿದ್ದಲ್ಲಿ ಕಳೆದ ಮೂರು ವರ್ಷದಲ್ಲಿ ಉಗ್ರರ ಒಂದು ದಾಳಿಯೂ ನಡೆಯಬಾರದಿತ್ತು. ಹಾಗಿದ್ದಲ್ಲಿ ಈ ಅವಧಿಯಲ್ಲಿ ಹಲವು ಉಗ್ರರು ಗಡಿ ದಾಟಿ ಬಂದು ದಾಳಿ ನಡೆಸಲು ಹೇಗೆ ಸಾಧ್ಯವಾಯಿತು?’ ಎಂದು ಸಮಿತಿ ಆಶ್ಚರ್ಯ ವ್ಯಕ್ತಪಡಿಸಿದೆ.

‘ನಂಬಲು ಸಾಧ್ಯವಿಲ್ಲದ ಮಾಹಿತಿ ನೀಡಿ ಗೊಂದಲ ಸೃಷ್ಟಿಸುವ ಬದಲು ಉಗ್ರರನ್ನು ಹತ್ತಿಕ್ಕಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಗಮನಕೊಡಿ’ ಎಂದು ಸಮಿತಿಯು ಸಚಿವಾಲಯಕ್ಕೆ ತಾಕೀತು ಮಾಡಿದೆ.

ಪಾಕಿಸ್ತಾನವು ತನ್ನ ಆಂತರಿಕ ಭದ್ರತಾ ಲೋಪಗಳನ್ನು ಮರೆ ಮಾಚಲು ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡದು ಮಾಡು
ತ್ತಿದೆ ಎಂದು ಸಚಿವಾಲಯ ಮಾಡಿರುವ ಆರೋಪದ ಬಗ್ಗೆ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT