ಭಾನುವಾರ, ಜನವರಿ 19, 2020
22 °C

ಶ್ರೀನಗರ| ಗಣರಾಜ್ಯೋತ್ಸವಕ್ಕೂ ಮುನ್ನ ತಪ್ಪಿದೆ ಉಗ್ರ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಶ್ರೀನಗರ: ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಭಾರಿ ಭಯೋತ್ಪಾದಕ ಕೃತ್ಯವೊಂದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಪ್ಪಿಸಿದ್ದಾರೆ.

ಮಸೂದ್‌ ಅಜರ್‌ ನೇತೃತ್ವದ ಜೈಷ್‌ ಎ ಮೊಹಮ್ಮದ್‌(ಜೆಇಎಂ)ಉಗ್ರ ಸಂಘಟನೆ ರೂಪಿಸಿದ್ದ ದಾಳಿ ಮಾದರಿಯನ್ನು ಪೊಲೀಸರು ಧ್ವಂಸಗೊಳಿಸಿದ್ದು, ಐವರು ಉಗ್ರರನ್ನು ಬಂಧಿಸಿದ್ದಾರೆ.

‘ಬಂಧಿತ ಉಗ್ರರಿಂದ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಇದೊಂದು ಪ್ರಮುಖ ಗೆಲುವುವಾಗಿದೆ. ಹಜರತ್‌ಬಲ್‌ನಲ್ಲಿ ಎರಡು ಗ್ರನೇಡ್‌ ದಾಳಿಯ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಗಣರಾಜ್ಯೋತ್ಸವದ ಮುನ್ನ ದಿನಗಳಲ್ಲಿ ಭಾರಿ ದುರಂತವೊಂದು ತಪ್ಪಿದಂತಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ಟೀಟ್‌ ಮಾಡಿದ್ದಾರೆ.

ಐಜಾಜ್ ಅಹಮ್ಮದ್ ಶೇಖ್, ಉಮರ್‌ ಹಮೀದ್‌ ಶೇಖ್‌, ಇಂತಿಯಾಜ್ ಅಹಮ್ಮದ್ ಚಿಕ್ಲಾ, ಸಾಹಿಲ್‌ ಫಾರೂಕ್, ನಸೀರ್‌ ಅಹಮ್ಮದ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು