ಸಿಬಿಐ ನಿರ್ದೇಶಕ ವರ್ಮಾಗೆ ಕಡ್ಡಾಯ ರಜೆ : ಸರ್ಕಾರದ ನಿಲುವು ಪ್ರಶ್ನಿಸಿದ ಖರ್ಗೆ

7

ಸಿಬಿಐ ನಿರ್ದೇಶಕ ವರ್ಮಾಗೆ ಕಡ್ಡಾಯ ರಜೆ : ಸರ್ಕಾರದ ನಿಲುವು ಪ್ರಶ್ನಿಸಿದ ಖರ್ಗೆ

Published:
Updated:

ನವದೆಹಲಿ:ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರಿಗೆ ಕಡ್ಡಾಯ ರಜೆ ನೀಡಿ ಆ ಸ್ಥಾನದಿಂದ ಅವರನ್ನು ತೆರವು ಮಾಡಿದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಸುಪ್ರೀಂಕೋರ್ಟ್ ‍ಗೆ ಅರ್ಜಿ ಸಲ್ಲಿಸಿದ್ದಾರೆ.

ಅಧಿಕಾರವಧಿ ಮುಗಿಯುವ ಮುನ್ನವೇ ವರ್ಮಾ ಅವರನ್ನು ನಿರ್ದೇಶಕ ಸ್ಥಾನದಿಂದ ತೆರವು ಮಾಡಲಾಗಿದೆ. ಹಾಗಾಗಿ ಅಧಿಕಾರವಧಿಯನ್ನು ಪೂರ್ತಿಗೊಳಿಸಲು ಅವಕಾಶ ನೀಡಬೇಕೆಂದು ಖರ್ಗೆ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ಅಲೋಕ್ ವರ್ಮಾ ಅವರಿಗೆ ಕಡ್ಡಾಯ ರಜೆ ನೀಡಿರುವ ಸರ್ಕಾರದ ನಿರ್ಧಾರವನ್ನು ಖರ್ಗೆ ಪ್ರಶ್ನಿಸಿದ್ದಾರೆ. ಕೇಂದ್ರ ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಅಥವಾ ಸರ್ಕಾರಕ್ಕೆ ಸಿಬಿಐ ನಿರ್ದೇಶಕರನ್ನು ವಜಾ ಮಾಡುವ ಅಧಿಕಾರ ಅಲ್ಲ.ಇಂಥಾ ನಡೆ ಏಕಪಕ್ಷೀಯ ಮತ್ತು ಕಾನೂನು ವಿರುದ್ಧ ಎಂದು ಖರ್ಗೆ ಹೇಳಿದ್ದಾರೆ.

ಅಲೋಕ್ ವರ್ಮಾ ಅವರ ಬಗ್ಗೆ ತನಿಖೆ ನಡೆಸಲು ಸಿವಿಸಿಗೆ ಸುಪ್ರೀಂಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿತ್ತು. ಅಲೋಕ್ ವರ್ಮಾ ಅವರ ಸ್ಥಾನಕ್ಕೆ  ನೇಮಕವಾಗಿರುವ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರು  ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಂತೆ ಸುಪ್ರೀಂಕೋರ್ಟ್ ನಿರ್ಬಂಧಿಸಿದೆ.
 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !