ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಸಿ ಪಕ್ಷದ ಲೋಗೊದಿಂದ ಕಾಂಗ್ರೆಸ್‌ ಚಿಹ್ನೆ ತೆಗೆದುಹಾಕಿದ ಮಮತಾ ಬ್ಯಾನರ್ಜಿ

Last Updated 23 ಮಾರ್ಚ್ 2019, 10:45 IST
ಅಕ್ಷರ ಗಾತ್ರ

ನವದೆಹಲಿ:ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು21 ವರ್ಷಗಳ ನಂತರಕಾಂಗ್ರೆಸ್‌ನಿಂದ ಅಧಿಕೃತವಾಗಿ ವಿಭಜನೆಗೊಂಡಿದ್ದು, ಲಾಂಛನದಿಂದಕಾಂಗ್ರೆಸ್‌ ಪಕ್ಷದ ಚಿಹ್ನೆಯನ್ನು ತೆಗೆದು ಹಾಕಿದೆ.

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಇನ್ನು ಮುಂದೆ ಕೇವಲ ತೃಣಮೂಲ ಪಕ್ಷವಾಗಲಿದೆ.ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 1998ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರಬಂದು ತೃಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದರು.

‘21 ವರ್ಷಗಳ ನಂತರ ಟಿಎಂಸಿ, ತೃಣಮೂಲ ಆಗಿದೆ. ಇದು ಬದಲಾವಣೆಯ ಸಮಯ’ ಎಂದು ಪಕ್ಷದ ಮುಖಂಡರು ತಿಳಿಸಿದರು.

ಪ್ರಸ್ತುತ ಹೊಸ ಲೋಗೋದಲ್ಲಿ ನೀಲಿ ಬಣ್ಣದ ಹಿನ್ನೆಲೆಯಲ್ಲಿ ಎರಡು ಹೂವುಗಳಿದ್ದು ಕೆಳಭಾಗದಲ್ಲಿ ತೃಣಮೂಲ ಎಂದು ಹಸಿರು ಬಣ್ಣದಲ್ಲಿ ಬರೆಯಲಾಗಿದೆ. ಹೊಸ ಲೋಗೋವನ್ನು ಕಳೆದ ಒಂದು ವಾರದಿಂದ ಬಳಸಾಗುತ್ತಿದೆ. ಇನ್ನು ಮುಂದೆ ಪಕ್ಷದ ಬ್ಯಾನರ್, ಪೋಸ್ಟರ್‌ಗಳಲ್ಲಿ ಹೊಸ ಲೋಗೋ ಅಳವಡಿಸಿಕೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ಅಧಿಕೃತ ಫೇಸ್‌ಬುಕ್‌, ಟ್ವಿಟರ್ ಪುಟಗಳಲ್ಲಿ ಮಮತಾ ಬ್ಯಾನರ್ಜಿ ಮತ್ತು ಕೆಲವು ಪ್ರಮುಖ ನಾಯಕರು ಹೊಸ ಲೋಗೋವನ್ನು ಹಾಕಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT