ಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು: ಯಶವಂತ್ ಸಿನ್ಹಾ 

7

ಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು: ಯಶವಂತ್ ಸಿನ್ಹಾ 

Published:
Updated:

ಕೋಲ್ಕತ್ತ: ನಾನು ಹೋರಾಡಲು ಬಾಕಿ ಇರುವುದು ಒಂದೇ ಒಂದು ಯುದ್ದ- ಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು. ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯೊಂದಿಗೆ ಎಲ್ಲರ ಬೆಂಬಲ ಪಡೆದು ಅಧಿಕಾರಕ್ಕೇರಿದರು. ಆನಂತರ ಜನರಿಗೆ ಏನೂ ನೀಡಲಿಲ್ಲ ಎಂದು ಹಿರಿಯ  ರಾಜಕಾರಣಿ ಯಶವಂತ್ ಸಿನ್ಹಾ ಹೇಳಿದ್ದಾರೆ.

ಕೋಲ್ಕತ್ತದಲ್ಲಿ ಶನಿವಾರ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೇತೃತ್ವದ ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶದಲ್ಲಿ ಸಿನ್ಹಾ ಈ ರೀತಿ ಮಾತನಾಡಿದ್ದಾರೆ.

ಪ್ರಸ್ತುತ ಆಡಳಿತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೋದಿಯನ್ನು ಪ್ರಧಾನಿ ಸ್ಥಾನದಿಂದ ತೆಗೆದು ಹಾಕುವುದಕ್ಕಾಗಿ ನಾವಿಲ್ಲಿ ಸೇರಿದ್ದೇವೆ ಎಂದು ಬಿಜೆಪಿ ನೇತಾರರು ಹೇಳುತ್ತಿದ್ದಾರೆ. ಆದರೆ ಮೋದಿಯನ್ನಲ್ಲ, ಆ ಮನಸ್ಥಿತಿಯನ್ನು. ಆ ಮನಸ್ಥಿತಿಯನ್ನು ವಿರೋಧಿಸುವುದಕ್ಕಾಗಿ ನಾವಿಲ್ಲಿ ಸೇರಿದ್ದೇವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಆ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ ಎಂದಿದ್ದಾರೆ ಸಿನ್ಹಾ.

ಸಮಾವೇಶದಲ್ಲಿ ಯಾರು ಏನು ಹೇಳಿದರು?
22 ಪಕ್ಷಗಳ  ಕಾಮನಬಿಲ್ಲು ಕಾರ್ಮೋಡವನ್ನು ಸರಿಸಲಿದೆ: ಸಿಂಘ್ವಿ
 ನಾನು ಈ ರ‍್ಯಾಲಿಯಲ್ಲಿ 22 ಪಕ್ಷಗಳ  ಕಾಮನಬಿಲ್ಲು ಕಾರ್ಮೋಡವನ್ನು ಸರಿಸುತ್ತಿರುವುದನ್ನು ನೋಡುತ್ತಿದ್ದೇನೆ. ಮೋಡಗಳು ಸರಿಯುತ್ತಿವೆ. ರಾಜಕೀಯ ಪಕ್ಷಗಳ ಕಾಮನಬಿಲ್ಲು ಮೂಡುತ್ತಿದೆ. ಮೈತ್ರಿಯ ಸಮಯ ಬಂದಿದೆ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಂಘ್ವಿ ಹೇಳಿದ್ದಾರೆ.

ಅತೀ ಹೆಚ್ಚು ಸುಳ್ಳು ಹೇಳಿದ ಸರ್ಕಾರ:  ಅರುಣ್ ಶೌರಿ
 ಇಷ್ಟೊಂದು ಸುಳ್ಳುಗಳನ್ನು ಯಾವುದೇ ಸರ್ಕಾರ ಹೇಳಿರಲಿಲ್ಲ. ಈ ರೀತಿ ಯಾವುದೇ ಸಂಸ್ಥೆಗಳು ಈ ರೀತಿ ನಡೆದುಕೊಂಡಿಲ್ಲ ಎಂದು ಅರುಣ್ ಶೌರಿ ಹೇಳಿದ್ದಾರೆ.

ಮುಂದಿನ ಸರ್ಕಾರ ರೈತ, ಬಡವರದ್ದಾಗಿರುತ್ತದೆ: ಜಯಂತ್ ಚೌಧರಿ
ಮುಂದಿನ ಸರ್ಕಾರ ರೈತ, ಬಡವರದ್ದಾಗಿರುತ್ತದೆ. ಪ್ರಧಾನಿ ಮೋದಿ ಅವರು ನೋಟು ರದ್ದತಿ,  ಜಿಎಸ್‌ಟಿ ಹೇರಿಕೆ ಮಾಡಿದ್ದಕ್ಕಾಗಿ ದೇಶದ ಜನರ ಕ್ಷಮೆ ಕೇಳಲಿ ಎಂದು ನಾನು ಈ ವೇದಿಕೆಯಲ್ಲಿ ನಿಂತು ಅವರಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಆದರೆ ಅವರು ಕ್ಷಮೆ ಕೇಳಲ್ಲ.
ಭಾರತ ನಾಳೆ ಯೋಚಿಸುವುದನ್ನು ಬಂಗಾಳ ಇಂದೇ ಯೋಚಿಸಿದೆ.  ಮಮತಾ ದೀದಿ ಅದನ್ನು ಇವತ್ತು ತೋರಿಸಿದ್ದಾರೆ. ಮಾನವೀಯತೆಯ ಸಮುದ್ರ ಎಂದು ಮಮತಾ ನೇತೃತ್ವದ ಸಮಾವೇಶವನ್ನು ಆರ್‌ಜೆಡಿ ನಾಯಕ  ಚೌಧರಿ ಕೊಂಡಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 29

  Happy
 • 2

  Amused
 • 4

  Sad
 • 0

  Frustrated
 • 18

  Angry

Comments:

0 comments

Write the first review for this !