ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮೀಯಾ ರೀತಿಯಲ್ಲಿ ಲಲಿತಾ ಜ್ಯುವೆಲ್ಲರಿ ಕಳ್ಳತನ: ಸೆರೆ ಸಿಕ್ಕ ಖದೀಮರು

Last Updated 4 ಅಕ್ಟೋಬರ್ 2019, 9:29 IST
ಅಕ್ಷರ ಗಾತ್ರ

ಚೆನ್ನೈ: ಬೆಕ್ಕು, ನಾಯಿಯ ಮುಖವಾಡ ಧರಿಸಿ ಸಿನಿಮೀಯಾ ರೀತಿಯಲ್ಲಿ ಇಲ್ಲಿನ ಲಲಿತಾ ಆಭರಣ ಮಳಿಗೆಗೆ ಕನ್ನ ಹಾಕಿ ₹13 ಕೋಟಿ ದೋಚಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ರಾತ್ರಿ ಲಲಿತಾ ಜ್ಯುವೆಲ್ಲರಿ ಮಳಿಗೆಯ ಗೋಡೆಯನ್ನು ಕೊರೆದು ಒಳನುಗ್ಗಿದ್ದ ಮುಖವಾಡ ಧರಿಸಿದ ಕಳ್ಳರು ಬರೋಬ್ಬರಿ 30 ಕೆ.ಜಿ.ಯಷ್ಟು ಚಿನ್ನಾಭರಣಗಳನ್ನು ದೋಚಿದ್ದಾರೆ. ಅಂಗಡಿ ಸಿಬ್ಬಂದಿ ಬೆಳಿಗ್ಗೆ ಮಳಿಗೆಯ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಮುಖವಾಡ ತೊಟ್ಟ ಇಬ್ಬರು ಆಭರಣಗಳನ್ನು ಕದಿಯುತ್ತಿರುವುದು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಳಮಹಡಿಯಲ್ಲಿ ಇರಿಸಿದ್ದ ಎಲ್ಲ ಆಭರಣಗಳೂ ಕಳುವಾಗಿವೆ. ಪೊಲೀಸ್ ಶ್ವಾನಗಳು ತಮ್ಮನ್ನು ಪತ್ತೆಹಚ್ಚದಂತೆ ಅವರು ಖಾರದ ಪುಡಿಗಳನ್ನು ಅಲ್ಲಿ ಚೆಲ್ಲಾಡಿದ್ದಾರೆ.

ಗೋಡೆಯಲ್ಲಿ ಕನ್ನ ಕೊರೆದಿರುವುದು
ಗೋಡೆಯಲ್ಲಿ ಕನ್ನ ಕೊರೆದಿರುವುದು

ಹಾಲಿವುಡ್‌ನ 'ದಿ ಡಾರ್ಕ್ ನೈಟ್' ಸಿನಿಮಾದಲ್ಲಿ ಜೋಕರ್‌ ಮುಖವಾಡ ಧರಿಸಿದ ವ್ಯಕ್ತಿಗಳು ಬ್ಯಾಂಕ್ ದರೋಡೆ ಮಾಡುವ ರೀತಿಯಲ್ಲಿಯೇ ಈ ದರೋಡೆ ಮಾಡಿದ್ದಾರೆ.

ಈ ವರ್ಷದ ಜನವರಿಯಿಂದ ತಿರುಚಿಯಲ್ಲಿ ನಡೆದಿರುವ ಬೃಹತ್ ಕಳ್ಳತನದ ಎರಡನೆಯ ಪ್ರಕರಣ ಇದಾಗಿದೆ. ಜನವರಿಯಲ್ಲಿ ಮುಸುಕುಧರಿಸಿದ್ದ ವ್ಯಕ್ತಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಶಾಖೆಯೊಂದಕ್ಕೆ ಕನ್ನ ಹಾಕಿ ಮೂರು ಲಾಕರ್‌ಗಳನ್ನು ಒಡೆದು 19 ಲಕ್ಷ ನಗದು, 470 ಸವರನ್ ಚಿನ್ನ ಮತ್ತು ದಾಖಲೆಗಳನ್ನು ಕದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT