ಉ.ಪ್ರ: ಯೋಗಿ ಕಛೇರಿ ಎದರು ರಸ್ತೆಯಲ್ಲೇ ನಮಾಜ್ ಮಾಡಿ ಮೋದಿ ವಿರುದ್ಧ ಘೋಷಣೆ ಕೂಗಿದ!

7

ಉ.ಪ್ರ: ಯೋಗಿ ಕಛೇರಿ ಎದರು ರಸ್ತೆಯಲ್ಲೇ ನಮಾಜ್ ಮಾಡಿ ಮೋದಿ ವಿರುದ್ಧ ಘೋಷಣೆ ಕೂಗಿದ!

Published:
Updated:

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದ ಕಚೇರಿ ಎದುರಿನ ರಸ್ತೆ ಮಧ್ಯದಲ್ಲೇ ನಮಾಜ್‌ ಮಾಡಿದ ಮುಸ್ಲಿಂ ನಾಯಕನೊಬ್ಬ, ಸಂಚಾರ ದಟ್ಟಣೆ ಸೃಷ್ಟಿಸಿದ ಪ್ರಸಂಗ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.‌

ಸ್ಕೂಟಿಯಲ್ಲಿ ಬಂದ ಆತ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾನೆ. ಇದರಿಂದಾಗಿ ಅತಿಗಣ್ಯ ವ್ಯಕ್ತಿಗಳು ಸಂಚರಿಸುವ ರಸ್ತೆಯಲ್ಲಿ ನೂರಾರು ವಾಹನಗಳು ಕೆಲಕಾಲ ಸಂಚಾರ ದಟ್ಟಣೆಗೆ ಸಿಲುಕಿವೆ.

ಈ ದೃಶ್ಯಾವಳಿಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ವ್ಯಕ್ತಿಯು ಸೊಂಟದಲ್ಲಿ ಚಾಕು ಇಟ್ಟುಕೊಂಡಿರುವುದೂ ದಾಖಲಾಗಿದೆ. ಪ್ರಕರಣಕ್ಕೆ ಕಾರಣವಾದ ವ್ಯಕ್ತಿಯನ್ನು ರಫೀಕ್‌ ಅಹ್ಮದ್‌ ಎನ್ನಲಾಗಿದ್ದು, ಶನಿವಾರ ಆತನನ್ನು ಬಂಧಿಸಲಾಗಿದೆ.

ಅತಿಗಣ್ಯ ವ್ಯಕ್ತಿಗಳು ಸಂಚರಿಸುವ ರಸ್ತೆಯಲ್ಲಿ ಇಂತಹ ಪ್ರಕರಣ ವರದಿಯಾಗಿರುವುದು ಭದ್ರತಾ ವ್ಯವಸ್ಥೆಯನ್ನು ಪ್ರಶ್ನೆಮಾಡಿದೆ. ಈ ಸಂಬಂಧ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ರಫೀಕ್‌ ಕೃತ್ಯವನ್ನು ಮುಸ್ಲಿಂ ನಾಯಕ ಖಲೀದ್‌ ರಶೀದ್‌ ಖಂಡಿಸಿದ್ದು, ಆತನನ್ನು ಮಾನಸಿಕ ಅಸ್ವಸ್ಥ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 7

  Angry

Comments:

0 comments

Write the first review for this !