ಮಂಗಳವಾರ, ಆಗಸ್ಟ್ 3, 2021
24 °C

ದಿ ಕಮ್ಯುನಿಸ್ಟ್‌ ಮ್ಯಾನಿಫೆಸ್ಟೊ ಬದಲು ಬಂತು ಭಗವದ್ಗೀತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಇ–ಕಾಮರ್ಸ್‌ ವೆಬ್‌ಸೈಟ್‌ ಮೂಲಕ ‘ದಿ ಕಮ್ಯುನಿಷ್ಟ್‌ ಮ್ಯಾನಿಫೆಸ್ಟೊ’ ಪುಸ್ತಕವನ್ನು ಖರೀದಿಸಿದ್ದ ಇಲ್ಲಿನ ನಿವಾಸಿಯೊಬ್ಬರು, ಪುಸ್ತಕ ಮನೆಗೆ ಬಂದಾಗ ಒಂದು ಕ್ಷಣ ಆಶ್ಚರ್ಯಕ್ಕೊಳಗಾಗಿದ್ದರು. ತಾವು ಖರೀದಿಸಿದ ಪುಸ್ತಕದ ಬದಲು ‘ಭಗವದ್ಗೀತೆ’ ಪ್ಯಾಕೆಜ್‌ ಒಳಗಿತ್ತು. 

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಸಹಿತ ಸುತಿರ್ಥೊ ದಾಸ್ ಪೋಸ್ಟ್‌ ಮಾಡಿದ್ದಾರೆ. ತಾವು ಖರೀದಿಸಿದ ಪುಸ್ತಕದ ಬದಲು ಪ್ಯಾಕೆಜ್‌ ಒಳಗೆ 120 ಪುಟಗಳ ಇಂಗ್ಲಿಷ್‌ ಅನುವಾದದ ಭಗವದ್ಗೀತೆಯಿತ್ತು. ಆದರೆ, ಪ್ಯಾಕೆಜ್‌ ಹೊರಭಾಗದಲ್ಲಿ ಇದ್ದ ಪುಸ್ತಕದ ಬಿಲ್‌ನಲ್ಲಿ ದಿ ಕಮ್ಯುನಿಷ್ಟ್‌ ಮ್ಯಾನಿಫೆಸ್ಟೊ ಪುಸ್ತಕದ ಹೆಸರಿತ್ತು ಎಂದು ವಿವರಿಸಿದ್ದಾರೆ.  ‌ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು