ಮಾನಸ ಸರೋವರ ಯಾತ್ರೆ: ತಮಿಳುನಾಡಿನ ವ್ಯಕ್ತಿ ಸಾವು

7

ಮಾನಸ ಸರೋವರ ಯಾತ್ರೆ: ತಮಿಳುನಾಡಿನ ವ್ಯಕ್ತಿ ಸಾವು

Published:
Updated:

ಚೆನ್ನೈ (ಪಿಟಿಐ): ತಮಿಳುನಾಡಿನಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ 29 ಮಂದಿ ಪೈಕಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಬುಧವಾರ ವಿಧಾನಸಭೆಗೆ ತಿಳಿಸಿದರು.

ಮೃತರನ್ನು  69 ವರ್ಷ ವಯಸ್ಸಿನ ರಾಮಚಂದ್ರನ್ ಎಂದು ಗುರುತಿಸಲಾಗಿದೆ. ಉಸಿರಾಟದ ತೊಂದರೆಗೆ ಒಳಗಾದ ಅವರಿಗೆ ಯಾತ್ರೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಮೃತದೇಹವನ್ನು ಕಠ್ಮಂಡು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಅವರ ಕುಟುಂಬದ ಸದಸ್ಯರು ನೇಪಾಳಕ್ಕೆ ತೆರಳಿದ್ದಾರೆ. ಮೃತದೇಹವನ್ನು ಇಂದು ಅಥವಾ ನಾಳೆ ಚೆನ್ನೈಗೆ ತರಲಾಗುವುದು. ನೇಪಾಳದಿಂದ ಚೆನ್ನೈನ 18 ಮಂದಿಯ ತಂಡವೊಂದು ಬುಧವಾರ ಬೆಳಿಗ್ಗೆ ಲಖನೌಗೆ ಬಂದಿದೆ  ಎಂದು ಪಳನಿಸ್ವಾಮಿ ತಿಳಿಸಿದರು.

ಮಾನಸ ಸರೋವರಕ್ಕೆ ಯಾತ್ರೆ ಕೈಗೊಂಡಿರುವ 1,500 ಭಾರತೀಯರು, ಮಳೆ ಹಾಗೂ ಭೂ ಕುಸಿತ ಉಂಟಾಗಿ ನೇಪಾಳ ಸಮೀಪದ ಟಿಬೆಟ್‌ ಪ್ರದೇಶದ ಗುಡ್ಡಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಯಾತ್ರಿಕರ ರಕ್ಷಣೆಗೆ ಭಾರತವು ನೇಪಾಳದ ಸಹಕಾರ ಕೋರಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !