ಭಾನುವಾರ, ಆಗಸ್ಟ್ 25, 2019
20 °C

ರಾಜ್ಯಸಭೆ ಚುನಾವಣೆ ರಾಜಸ್ಥಾನದಿಂದ ಸಿಂಗ್‌ ಕಣಕ್ಕೆ, ಇಂದು ನಾಮಪತ್ರ ಸಲ್ಲಿಕೆ

Published:
Updated:

ಜೈಪುರ: ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಇದೇ ತಿಂಗಳ 26ರಂದು ನಡೆಯುವ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಇಂದು (ಮಂಗಳವಾರ) ನಾಮಪತ್ರ ಸಲ್ಲಿಸಲಿದ್ದಾರೆ.

‘ಸಿಂಗ್‌ ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಮಾಡಿ ಕಳುಹಿಸಲು ಪಕ್ಷ ನಿರ್ಧರಿಸಿದೆ’ ಎಂದು  ಉಪಮುಖ್ಯ ಮಂತ್ರಿಯೂ ಆದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಚಿನ್‌ ಪೈಲಟ್‌ ಸೋಮವಾರ ತಿಳಿಸಿದ್ದಾರೆ.

ಬಿಜೆಪಿಯಿಂದ ಆಯ್ಕೆಯಾಗಿದ್ದ ಮದನ್‌ ಲಾಲ್ ಸೈನಿ ಅವರು ಜೂನ್‌ನಲ್ಲಿ ನಿಧನರಾಗಿದ್ದರಿಂದ ಒಂದು ಸ್ಥಾನ ಖಾಲಿ ಇದೆ. ಆ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ.

Post Comments (+)