ಆಸ್ಪತ್ರೆಯಿಂದಲೇ ‘ವಿಶ್ವ ಕ್ಯಾನ್ಸರ್‌ ದಿನ’ದ ಸಂದೇಶ ನೀಡಿದ ಪರಿಕ್ಕರ್‌

7

ಆಸ್ಪತ್ರೆಯಿಂದಲೇ ‘ವಿಶ್ವ ಕ್ಯಾನ್ಸರ್‌ ದಿನ’ದ ಸಂದೇಶ ನೀಡಿದ ಪರಿಕ್ಕರ್‌

Published:
Updated:

ನವದೆಹಲಿ: ‘ಮನುಷ್ಯ ಮನಸ್ಸು ಮಾಡಿದರೆ ಎಂತಹ ರೋಗವನ್ನಾದರೂ ಮೆಟ್ಟಿ ನಿಲ್ಲಬಹುದು’,–ಹೀಗೆಂದು ಟ್ವೀಟ್‌ ಮಾಡಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ವಿಶ್ವ ಕ್ಯಾನ್ಸರ್‌ ದಿನಕ್ಕೆ ಸಂದೇಶ ನೀಡಿದ್ದಾರೆ.

ಮೇದೋಜೀರಕ ಗ್ರಂಥಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಪರಿಕ್ಕರ್, ಸದ್ಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವ ಕ್ಯಾನ್ಸರ್‌ ದಿನದ ಹ್ಯಾಷ್‌ಟ್ಯಾಗ್‌ನೊಂದಿಗೆ ಅವರು ಮಾಡಿರುವ ಟ್ವೀಟನ್ನು 3000 ಮಂದಿ ಹಂಚಿಕೊಂಡಿದ್ದಾರೆ ಹಾಗೂ 11 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ.

ಕಳೆದ ಗುರುವಾರ ಏಮ್ಸ್‌ಗೆ ದಾಖಲಾಗಿದ್ದ ಪರಿಕ್ಕರ್‌ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗುವ ಮೊದಲು ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಗೋವಾಗೆ ಭೇಟಿ ನೀಡಿ ಪರಿಕ್ಕರ್‌ ಆರೋಗ್ಯ ವಿಚಾರಿಸಿದ್ದರು.

ಮನೋಹರ್ ಪರಿಕ್ಕರ್‌ ಕೆಲವು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಿರುವಾಗಲೇ ಪರಿಕ್ಕರ್‌ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಜೊತೆಗೆ ಕಳೆದ ವಾರವಷ್ಟೇ ಗೋವಾ ವಿಧಾನಸಭೆಯಲ್ಲಿ ಬಜೆಟ್‌ ಮಂಡಿಸಿದ್ದರು. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !