ಮಂಗಳವಾರ, ಸೆಪ್ಟೆಂಬರ್ 24, 2019
29 °C

ಆರ್ಥಿಕ ಹಿಂಜರಿತ: ಎರಡು ದಿನ ಕಾರು ಉತ್ಪಾದನೆ ಸ್ಥಗಿತಕ್ಕೆ ‘ಮಾರುತಿ’ ನಿರ್ಧಾರ

Published:
Updated:

ನವದೆಹಲಿ: ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ತನ್ನ ಗುರುಗ್ರಾಮ ಮತ್ತು ಮಾನೇಸರ ಘಟಕಗಳಲ್ಲಿ ಎರಡು ದಿನ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಸೆ.7 ಮತ್ತು 9ರಂದು ಎರಡೂ ಘಟಕಗಳು ಕಾರ್ಯನಿರ್ವಹಿಸುವುದಿಲ್ಲ. ಈ ಎರಡೂ ದಿನಗಳನ್ನು ಉತ್ಪಾದನೆ ಮಾಡದ ದಿನ ಎಂದು ಘೋಷಿಸಲಾಗುವುದು ಎಂದು ಮಾರುತಿ ಷೇರು ಮಾರುಕಟ್ಟೆಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದೆ. ಮಾರುತಿ ಸುಜುಕಿ ಷೇರುಗಳು ಶೇ 2.5ರಷ್ಟು ಕುಸಿತ ಕಂಡಿವೆ. ಬುಧವಾರ ಮಧ್ಯಾಹ್ನ ₹5900ಕ್ಕೆ ಮಾರುತಿ ಷೇರು ಮಾರಾಟವಾಗುತ್ತಿತ್ತು. 

ಇದನ್ನೂ ಓದಿ: ಪುರುಷೋತ್ತಮ ಬಿಳಿಮಲೆ ಕಿವಿಮಾತು– ಇನ್ನೊಂದು ವರ್ಷ ಹುಷಾರಾಗಿರಿ

ಆರ್ಥಿಕ ಹಿಂಜರಿತದಿಂದ ಮಾರಾಟ ಕುಸಿತವಾದ ಹಿನ್ನೆಲೆಯಲ್ಲಿ ಈಗಾಗಲೇ ಮಾರುತಿ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಉತ್ಪಾದನಾ ಸಾಮರ್ಥ್ಯವನ್ನು ಶೇ 33.99ರಷ್ಟು ಇಳಿಸಿರುವ ಕಂಪನಿ ಸತತ ಏಳನೇ ತಿಂಗಳು ಉತ್ಪಾದನೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ.

ಆರ್ಥಿಕ ಹಿಂಜರಿತ ಕುರಿತ ಇನ್ನಷ್ಟು ಬರಹಗಳಿಗೆ www.prajavani.net/tags/financial-crisis ಲಿಂಕ್ ಕ್ಲಿಕ್ ಮಾಡಿ

 

ಇನ್ನಷ್ಟು...

ದ್ವೇಷ ಬಿಡಿ, ಆರ್ಥಿಕತೆಯತ್ತ ದೃಷ್ಟಿ ನೆಡಿ: ಮನಮೋಹನ್‌ ಸಿಂಗ್‌ ಸಲಹೆ
ಬೀದಿಗೆ ಬೀಳುವ ಆತಂಕದಲ್ಲಿ 12 ಲಕ್ಷ ಕಾರ್ಮಿಕರು
ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆ ಕನಸಿಗೆ ಗುಡ್ ಬೈ ಹೇಳಿ: ಸುಬ್ರಮಣಿಯನ್ ಸ್ವಾಮಿ
ಆರ್ಥಿಕ ಹಿಂಜರಿತ- ವಾಣಿಜ್ಯ ವಾಹನ ಮಾರಾಟ ಭಾರಿ ಕುಸಿತ
ನಮ್ಮ ಆದಾಯಕ್ಕೂ ಜಿಡಿಪಿಗೂ ಏನು ಸಂಬಂಧ?
ಗೋಡಂಬಿಗೂ ಹಿಂಜರಿತದ ಬಿಸಿ; ಕುಸಿದ ಖರೀದಿ ಸಾಮರ್ಥ್ಯ
ಜವಳಿ ಉದ್ಯಮಕ್ಕೂ ಕವಿದ ಕಾರ್ಮೋಡ
ಬೇಡಿಕೆ ಕುಸಿತ ಸೃಷ್ಟಿಸಿದ ಆತಂಕ
ಬ್ಯಾಂಕುಗಳ ವಿಲೀನ: ನೌಕರರಿಗೆ ಭಯಬೇಡ- ನಿರ್ಮಲಾ ಸೀತಾರಾಮನ್
ಮನಮೋಹನ್ ಸಿಂಗ್ ಹಾಗೆ ಹೇಳಿದ್ದಾರೆಯೇ? ಸರಿ, ಧನ್ಯವಾದಗಳು: ನಿರ್ಮಲಾ ಸೀತಾರಾಮನ್
ಆರ್ಥಿಕ ಪ್ರಗತಿಗೆ ಮೊದಲ ಆದ್ಯತೆ: ನಿರ್ಮಲಾ ಸೀತಾರಾಮನ್‌
ಆರ್ಥಿಕ ಬಿಕ್ಕಟ್ಟು, ತಿನ್ನದಿರಿ ಪೆಟ್ಟು
ಗಣೇಶನಿಗೂ ತಟ್ಟಿದ ಆರ್ಥಿಕ ಹಿಂಜರಿತ: ದೇಣಿಗೆ ಕುಸಿತ

Post Comments (+)