ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ರಾಹುಲ್ ಜತೆ ಪ್ರಿಯಾಂಕಾ ಗಾಂಧಿ ರೋಡ್ ಶೋ

Last Updated 11 ಫೆಬ್ರುವರಿ 2019, 12:43 IST
ಅಕ್ಷರ ಗಾತ್ರ

ಲಖನೌ: 'ಮಿಷನ್ ಯುಪಿ' ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಪ್ರಿಯಾಂಕಾ ಗಾಂಧಿ ವಾದ್ರಾ ಲಖನೌದಲ್ಲಿ ಸೋಮವಾರ ರೋಡ್ ಶೋ ನಡೆಸಿದ್ದಾರೆ.

ಏರ್‌ಪೋರ್ಟ್ ಕ್ರಾಸಿಂಗ್ ರಸ್ತೆಯಿಂದ ಪ್ರಿಯಾಂಕಾ ರೋಡ್ ಶೋ ಆರಂಭವಾಗಿದ್ದು,ರಾಹುಲ್ ಗಾಂಧಿ ಜತೆಗಿದ್ದಾರೆ. ಪ್ರಿಯಾಂಕಾ ಸಂಚರಿಸುತ್ತಿರುವ ಬಸ್ ಮುಂದೆ ಸಾಗುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಮತ್ತು ರಾಹುಲ್ ಕಡೆ ಪುಷ್ಪವರ್ಷ ಮಾಡಿದ್ದಾರೆ.ರೋಡ್ ಶೋನಲ್ಲಿ ಬಿಜೆಪಿ ಸರ್ಕಾರದ ರಫೇಲ್ ಹಗರಣದ ವಿರುದ್ಧ ಪ್ರತಿಭಟಿಸಿದ ರಾಹುಲ್,ರಟ್ಟಿನಿಂದ ಮಾಡಿದ ರಫೇಲ್ ಜೆಟ್ ವಿಮಾನದ ಮಾದರಿಯನ್ನು ತೋರಿಸಿದ್ದಾರೆ.

ಪ್ರಿಯಾಂಕಾ ರೋಡ್ ಶೋನಿಂದಾಗಿ ವಿಮಾನ ನಿಲ್ದಾಣದ ಬಳಿ ಸಂಚಾರ ದಟ್ಟಣೆ ಕಂಡು ಬಂದಿದೆ.

ಲಾಲ್‍ಬಾಗ್ ಕ್ರಾಸಿಂಗ್‍ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೇಶ್ ಕೆ ಸಮ್ಮನ್ ಮೇ, ಪ್ರಿಯಾಂಕಾ ಜೀ ಮೈದಾನ್ ಮೇ ಎಂದು ಘೋಷಣೆ ಕೂಗಿ ಪ್ರಿಯಾಂಕಾ, ರಾಹುಲ್‍ಗೆ ಸ್ವಾಗತ ಕೋರಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯರ ಅಮ್ಮರ್ ರಿಜ್ವಿ ಅವರು ಲಾಲ್‍ಬಾಗ್ ಕ್ರಾಸಿಂಗ್‍ನಲ್ಲಿ ಪ್ರಿಯಾಂಕಾ ಅವರಿಗೆ ಸ್ವಾಗತ ನೀಡಿದ್ದಾರೆ

ಲಾಲ್‍ಬಾಗ್ ಸುತ್ತಮುತ್ತಲೂ ಕಾಂಗ್ರೆಸ್ ಕಾರ್ಯಕರ್ತರು ಕಿಕ್ಕಿರಿದು ನಿಂತಿದ್ದು, ದಹನ್ ಕರೋ ಮೋದಿ ಕಿ ಲಂಕಾ, ಬೆಹನ್ ಪ್ರಿಯಾಂಕಾ, ಬೆಹನ್ ಪ್ರಿಯಾಂಕಾ (ಸಹೋದರಿ ಪ್ರಿಯಾಂಕಾ, ಮೋದಿಯವರ ಲಂಕೆಯನ್ನು ದಹನ ಮಾಡಿ )ಎಂದು ಘೋಷಣೆ ಕೂಗಿದ್ದಾರೆ.

ಕಾಂಗ್ರೆಸ್ ನಾಯಕ ನಸಿಮುದ್ದೀನ್ ಸಿದ್ದಿಖಿ ಕೂಡಾ ಲಾಲ್ ಬಾಗ್ ಕ್ರಾಸಿಂಗ್‍ನಲ್ಲಿ ಪ್ರಿಯಾಂಕಾ ಗಾಂಧಿಗೆ ಸ್ವಾಗತ ಕೋರಿದ್ದಾರೆ.

ರಾಹುಲ್ ರಾಜಕೀಯ ಜೀವನಮುಗಿಯಿತು: ಅಕಾಲಿ ದಳ ನೇತಾರ
ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಕ್ರಿಯ ರಾಜಕಾರಣಕ್ಕಿಳಿಸುವ ಮೂಲಕ ರಾಹುಲ್ ರಾಜಕೀಯ ಜೀವನ ಮುಗಿಯಿತು ಎಂದು ಶಿರೋಮಣಿ ಅಕಾಲಿ ದಳ ನೇತಾರ ಬಿಕ್ರಂ ಸಿಂಗ್ ಮಜಿತಿಯಾ ಹೇಳಿದ್ದಾರೆ.

ಚಂಡೀಗಢದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಂಗ್, ಆಜ್ ಭೋಗ್ ಪಾಯಿ ಗಯಾ ಹೈ ರಾಹುಲ್ ಗಾಂಧಿ ಜಿ ದಾ (ಇಂದು ರಾಹುಲ್ ಗಾಂಧಿಯ ರಾಜಕೀಯಕ್ಕೆ ಚರಮಗೀತೆ ಹಾಡಲಾಗಿದೆ) ಎಂದಿದ್ದಾರೆ.

ಆ ದೇಖೇ ಝರಾ, ಕಿಸ್ ಮೇ ಕಿತ್ ನಾ ಹೈ ಧಮ್
ಸಂಸದ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯದರ್ಶಿ ಜ್ಯೋತಿರಾಧಿತ್ಯ ಸಿಂಧ್ಯಾ ಅವರು ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಫೋಟೋ ಟ್ವಿಟರ್‌ನಲ್ಲಿ ಶೇರ್ ಮಾಡಿ ಈ ರೀತಿ ಶೀರ್ಷಿಕೆ ನೀಡಿದ್ದಾರೆ.

ಇನ್ನೊಂದು ಟ್ವೀಟ್‍ನಲ್ಲಿ ಸಿಂಧ್ಯಾ ಅವರ ಜನ್ ಜನ್ ಕೀ ಯಹೀ ಪುಕಾರ್ ,ಅಬ್ ಅಲ್‍ವಿದಾ ಜುಮ್ಲಾ ಸರ್ಕಾರ್ ( ಜನರೆಲ್ಲರೂ ಹೇಳುತ್ತಿದ್ದಾರೆ, ಜುಮ್ಲಾ ಸರ್ಕಾರಕ್ಕೆ ವಿದಾಯ) ಎಂದಿದ್ದಾರೆ.

ವಿದ್ಯುತ್ ತಂತಿಯಿಂದ ರಕ್ಷಣೆ
ರೋಡ್ ಶೋನಲ್ಲಿ ಬಸ್‍ನ ಮೇಲೇರಿ ಕುಳಿತಿರುವ ರಾಹುಲ್, ಪ್ರಿಯಾಂಕಾ ಮತ್ತು ಜ್ಯೋತಿರಾಧಿತ್ಯ ಸಿಂಧ್ಯಾ ಅವರ ಪ್ರಾಣಕ್ಕೆ ಅಪಾಯವಾಗದಂತೆ ವಿದ್ಯುತ್ ತಂತಿಯನ್ನು ಸರಿಸುತ್ತಿರುವ ಅಂಗರಕ್ಷಕರು

ಹಜರತ್‍ಗಂಜ್ ಜಿಪಿಒ ಪಾರ್ಕ್ ನಲ್ಲಿರುವ ಸರ್ದಾರ್ ಪಟೇಲ್ ಪ್ರತಿಮೆಗೆ ಹೂವಿನ ಹಾರ ಅರ್ಪಿಸಿದ ರಾಹುಲ್ ಮತ್ತು ಪ್ರಿಯಾಂಕಾ ಮಹಾತ್ಮಗಾಂಧಿ ಮತ್ತು ಬಿ.ಆರ್ ಅಂಬೇಡ್ಕರ್ ಪ್ರತಿಮೆಗಳಿ ಪುಷ್ಪ ನಮನ ಸಲ್ಲಿಸಿದ್ದಾರೆ.

ಬಬುವಾ, ಬುವಾ ದಲಾಲ್ ಹೈ
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಬಹುಜನ್ ಸಮಾಜ್ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಅವರ ವಿರುದ್ದ ಕಾಂಗ್ರೆಸ್ ಕಚೇರಿ ಹೊರಗೆ ಬುಬುವಾ, ಬುವಾ ದಲಾಲ್ ಹೈ ಎಂಬ ಘೋಷಣೆ ಕೂಗಿದ್ದಾರೆ.

ಕಾಂಗ್ರೆಸ್ ರೋಡ್ ಶೋ ಮುಕ್ತಾಯ
ಬಸ್‍ನಿಂದ ಇಳಿದ ರಾಹುಲ್ ಮತ್ತು ಪ್ರಿಯಾಂಕಾ ಅಪ್ಪ ರಾಜೀವ್ ಗಾಂಧಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾಂಗ್ರೆಸ್ ಕಚೇರಿಗೆ ಪ್ರವೇಶಿಸಿದರು.

ಯುಪಿಸಿಸಿ ಪ್ರಧಾನ ಕಚೇರಿಯಲ್ಲಿ ರಾಜ್ ಬಬ್ಬರ್ ಅವರು ರಾಹುಲ್, ಪ್ರಿಯಾಂಕಾ ಮತ್ತು ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT