ಮೋದಿಯನ್ನು ಮನೆಗೆ ಕಳುಹಿಸಿ ದೇಶವನ್ನು ರಕ್ಷಿಸಿ: ಎಂ.ಕೆ ಸ್ಟಾಲಿನ್

7

ಮೋದಿಯನ್ನು ಮನೆಗೆ ಕಳುಹಿಸಿ ದೇಶವನ್ನು ರಕ್ಷಿಸಿ: ಎಂ.ಕೆ ಸ್ಟಾಲಿನ್

Published:
Updated:

ಕೋಲ್ಕತ್ತ: ಇಲ್ಲಿ ನಡೆಯುತ್ತಿರುವ ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶದಲ್ಲಿ ಮಾತನಾಡಿದ ಡಿಎಂಕೆ ನೇತಾರ ಎಂ.ಕೆ. ಸ್ಟಾಲಿನ್, ಮೋದಿಗೆ ಮಮತಾ ಎಂದರೆ ಭಯ. ಮೋದಿ ಹೋದಲ್ಲೆಲ್ಲಾ ವಿಪಕ್ಷದ ಮೇಲೆ ಗುಡುಗುತ್ತಾರೆ. ಅವರಿಗೆ ವಿಪಕ್ಷಗಳ ಭಯ ಇದೆ ಹಾಗಾಗಿ ಅವರು  ನಮ್ಮ ಮೇಲೆ ಶಾಪ ಹಾಕುತ್ತಿರುತ್ತಾರೆ. ಅವರಿಗೆ ನಮ್ಮ ಒಗ್ಗಟ್ಟು ನೋಡಿ ಭಯವಾಗಿದೆ. ಭಾರತದ ರಕ್ಷಣೆಗಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು: ಯಶವಂತ್ ಸಿನ್ಹಾ 

ಸೋಲು ಖಚಿತ ಎಂಬುದು ಮೋದಿಗೆ ಮನವರಿಕೆಯಾಗಿದೆ. ನನಗೆ ಮೋದಿ ಮೇಲೆ ವೈಯಕ್ತಿಕ ದ್ವೇಷವೇನೂ ಇಲ್ಲ. ಆದರೆ ನಾನು ಅವರ ನೀತಿಗಳನ್ನು ವಿರೋಧಿಸುತ್ತೇನೆ. ಮೋದಿ ಈ ದೇಶವನ್ನು ಖಾಸಗಿ ಕಂಪನಿಯನ್ನಾಗಿ ಮಾಡಿದ್ದಾರೆ,.ಅವರು ಈ ಕಂಪನಿಯ ಎಂ.ಡಿ. ಭ್ರಷ್ಟಾಚಾರದ ಪ್ರಧಾನಮೂಲವೇ ಮೋದಿ.

ಮುಂದಿನ ಲೋಕಸಭಾ ಚುನಾವಣೆ ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಲಿದೆ ಎಂದ ಸ್ಟಾಲಿನ್ ಮೋದಿಯನ್ನು ಮನೆಗೆ ಕಳುಹಿಸಿ ದೇಶ ರಕ್ಷಿಸಿ ಎಂದು ಕರೆ ನೀಡಿದ್ದಾರೆ.

ಸ್ಟಾಲಿನ್ ಗೆಲ್ಲುತ್ತಾರೆ: ಮಮತಾ ಬ್ಯಾನರ್ಜಿ
ಈ ಬಾರಿಯ ಚುನಾವಣೆಯಲ್ಲಿ ಸ್ಟಾಲಿನ್ ಎಲ್ಲ ಸೀಟುಗಳನ್ನು ಗೆಲ್ಲುತ್ತಾರೆ. ಅವರಿಗೆ ಮುಂಚಿತವಾಗಿ ಅಭಿನಂದನೆಗಳು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಎಲ್ಲ ಸಂಸ್ಥೆಗಳನ್ನು ಕೇಂದ್ರ ನಿರ್ನಾಮ ಮಾಡಿದೆ:  ಶರದ್ ಯಾದವ್

ಈಗ ಕೇಂದ್ರದಲ್ಲಿರುವ ಸರ್ಕಾರ ಎಲ್ಲ ಸಂಸ್ಥೆಗಳನ್ನೂ ನಾಶ ಮಾಡಿದೆ ಎಂದು ಎಲ್‍ಜೆಪಿ ನೇತಾರ ಶರದ್ ಯಾದವ್ ಹೇಳಿದ್ದಾರೆ.
ನಮ್ಮ ದೇಶ ಅಪಾಯದಲ್ಲಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಎಲ್ಲಾ ಕಡೆ ಧ್ವಂಸವಾಗುತ್ತಿದೆ. ನೋಟು ರದ್ದತಿ ಮತ್ತು ಜಿಎಸ್‍ಟಿ ದೇಶವನ್ನು ನಾಶ ಮಾಡಿದೆ. 2 ಕೋಟಿ  ಜನರಿಗೆ ಉದ್ಯೋಗ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಅದು ಹಲವಾರು ಕೆಲಸಗಳನ್ನು ಇಲ್ಲದಂತೆ ಮಾಡಿತು ಎಂದಿದ್ದಾರೆ ಶರದ್ ಯಾದವ್.

ಇದನ್ನೂ ಓದಿ: ಈ ಪ್ರಧಾನಿ ಕೆಲಸ ಮಾಡುವ ಪ್ರಧಾನಿ ಅಲ್ಲ, ಪ್ರಚಾರ ಬಯಸುವ ಪ್ರಧಾನಿ: ನಾಯ್ಡು

ಬಿಜೆಪಿ ಸುಳ್ಳು ಹೇಳುತ್ತಿದೆ: ಬಿಎಸ್‍ಪಿ ಸಂಸದ ಸತೀಶ್ ಮಿಶ್ರಾ
ವೋಟು ಪಡೆಯುವುದ್ಕಕಾಗಿ ಬಿಜೆಪಿ ಸುಳ್ಳು ಹೇಳುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ರೈತರು, ಕಾರ್ಮಿಕರು, ಅಲ್ಪ ಸಂಖ್ಯಾತರು, ದಲಿತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಿಎಸ್‍ಪಿ ಸಂಸದ ಸತೀಶ್ ಮಿಶ್ರಾ ಹೇಳಿದ್ದಾರೆ.

ಪ್ರಾಣಿಗಳನ್ನು ಖರೀದಿಸುವಂತೆ ಅವರು ಶಾಸಕರನ್ನು ಖರೀದಿಸುತ್ತಿದ್ದಾರೆ: ನಾಯ್ಡು
ಕರ್ನಾಟಕದ ರಾಜಕೀಯದ ಬಗ್ಗೆ ಮಾತನಾಡಿದ ಚಂದ್ರಬಾಬು ನಾಯ್ಡು, ಪ್ರಾಣಿಗಳನ್ನು ಖರೀದಿಸುವಂತೆ ಅವರು ಶಾಸಕರನ್ನು ಖರೀದಿಸುತ್ತಿದ್ದಾರೆ. ಇವಿಎಂ ಎಂಬುದು ದೊಡ್ಡ ಹಗರಣ, ನಾವು ಮತಪತ್ರಕ್ಕೆ ಮರಳ ಬೇಕಿದೆ ಎಂದಿದ್ದಾರೆ.

ನಾವು ಯುವಜನರ, ಮಹಿಳೆಯರ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು: ಶರದ್ ಪವಾರ್
ನಾವು ನಾವು ಯುವಜನರ, ಮಹಿಳೆಯರ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು. ನಾವು ಪ್ರಧಾನಿ  ಸೀಟಿಗಾಗಿ ಹೋರಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಆದರೆ ದೇಶವನ್ನು ಕಾಪಾಡುವುದಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ ಎಂದು ಎನ್‍ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.

ಈ ಒಗ್ಗಟ್ಟು ನಮ್ಮಲ್ಲಿ ಭರವಸೆ ಹುಟ್ಟು ಹಾಕಿದೆ. ಈ ಸಮಾವೇಶ ಆಯೋಜಿಸಿದ್ದಕ್ಕಾಗಿ ನಾನು ಮಮತಾ ಬ್ಯಾನರ್ಜಿ ಅವರನ್ನು ಅಭಿನಂದಿಸುತ್ತೇನೆ. ಬಿಜೆಪಿ ಸರ್ಕಾರದಿಂದ ಬೇಸತ್ತು ರೈತರು ಆತ್ಮಹತ್ಯೆ ಮಾಡುತ್ತಿದ್ದಾರೆ ಎಂದಿದ್ದಾರೆ ಪವಾರ್.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !