ಶುಕ್ರವಾರ, ಜನವರಿ 21, 2022
30 °C

ಸಮಸ್ಯೆಗೆ ಹಿಂಸೆಯೊಂದೇ ಪರಿಹಾರವಲ್ಲ: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನರೇಂದ್ರ ಮೋದಿ

ನವದೆಹಲಿ: ಹಿಂಸೆ ಮತ್ತು ಕ್ರೌರ್ಯದಿಂದ ಎಂದಿಗೂ, ಯಾವ ಸಮಸ್ಯೆಗೂ ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ. ಶಾಂತಿ ಮತ್ತು ಅಹಿಂಸೆಗೆ ಅಂತಿಮ ಜಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

1919ರಲ್ಲಿ ನಡೆದ ಜಲಿಯನ್‌ ವಾಲಾ ಬಾಗ್‌ ನರಮೇಧ ಕ್ರೌರ್ಯ ಮತ್ತು ಹಿಂಸೆಯ ಪರಮಾವಧಿಯ ಸಂಕೇತ. ಇದರೊಂದಿಗೆ ಶಾಂತಿ, ಅಹಿಂಸೆ, ತ್ಯಾಗ ಮತ್ತು ಬಲಿದಾನಕ್ಕೆ ಅಂತಿಮ ಜಯ ಎಂಬ ಸತ್ಯದ ನಿದರ್ಶನವೂ ಹೌದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಇತಿಹಾಸದಲ್ಲಿಯೇ ಕರಾಳ ಅಧ್ಯಾಯವಾದ ಜಲಿಯನ್‌ವಾಲಾ ಬಾಗ್‌ ಘಟನೆಗೆ ಮುಂದಿನ ವರ್ಷ ನೂರು ವರ್ಷ ತುಂಬಲಿದೆ.

ಆ ಹಿನ್ನೆಲೆಯಲ್ಲಿ ಪ್ರಧಾನಿ ಈ ವಿಷಯವನ್ನು ಭಾನುವಾರ ಪ್ರಸಾರವಾದ ’ಮನದ ಮಾತು’ ತಿಂಗಳ ರೆಡಿಯೊ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ.

ಅಮೃತಸರದ ಜಲಿಯನ್‌ವಾಲಾ ಬಾಗ್‌ ಎಂಬಲ್ಲಿ ಬ್ರಿಟಿಷ್‌ ಸೇನೆ ನಡೆಸಿದ ಅಮಾನುಷ ಗುಂಡಿನ ದಾಳಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಅಮಾಯಕ ಭಾರತೀಯರು ಬಲಿಯಾಗಿದ್ದರು.

ಪ್ರಾಮಾಣಿಕತೆಯ ಹಬ್ಬ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಹಕಾರ ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆ. ಜಿಎಎಸ್‌ಟಿ ಈ ದೇಶದ ‘ಲೈಸನ್ಸ್‌ ರಾಜ್‌’ ವ್ಯವಸ್ಥೆ
ಯನ್ನು ಕೊನೆಗಾಣಿಸಿದ ‘ಪ್ರಾಮಾಣಿಕತೆಯ ಹಬ್ಬ’ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು