ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಜನರೊಂದಿಗೆ ‘ನೌಕರಿ ಪೆ ಚರ್ಚಾ‘ ಮಾಡಲಿ: ಸೀತಾರಾಮ ಯೆಚೂರಿ

Last Updated 21 ಜನವರಿ 2020, 12:45 IST
ಅಕ್ಷರ ಗಾತ್ರ

ನವದೆಹಲಿ: ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರು ಹೆಚ್ಚುತ್ತಿರುವನಿರುದ್ಯೋಗ ಸಮಸ್ಯೆಯಬಗ್ಗೆ ಸರ್ಕಾರವನ್ನು ಟೀಕಿಸಿದ್ದು ಪ್ರಧಾನಿ ಮೋದಿಯವರು ನೌಕರಿ ಪೇ ಚರ್ಚಾ ( ಉದ್ಯೋಗದ ಬಗ್ಗೆ ಚರ್ಚೆ) ಮಾಡಲಿ ಎಂದು ಸವಾಲು ಹಾಕಿದ್ದಾರೆ.

45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆಯನ್ನ ಭಾರತ ಎದುರಿಸುತ್ತಿದೆ.

ಪ್ರಧಾನಿ ಮೋದಿಯವರು ನೌಕರಿ ಪೆ ಚರ್ಚಾಮಾಡಲೇಬೇಕು, ನೋಟು ರದ್ದತಿಮತ್ತು ಜಿಎಸ್‌ಟಿ ಮೂಲಕ ನಿರುದ್ಯೋಗಿಗಳಾದಲಕ್ಷಾಂತರ ಜನರ ಮನ್‌ ಕಿ ಬಾತ್‌ ( ಮನದ ಮಾತು)ಅನ್ನು ಕೇಳಬೇಕು ಎಂದು ಅವರು ಟ್ವೀಟ್‌ ಮೂಲಕ ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಸೋಮವಾರ ಪರೀಕ್ಷಾ ಪೇ ಚರ್ಚಾ ( ಪರೀಕ್ಷ ಬಗ್ಗೆ ಚರ್ಚೆ) ಕಾರ್ಯಕ್ರಮವನ್ನುಹಮ್ಮಿಕೊಂಡಿದ್ದರು.

ಸ್ವಾತಂತ್ರ್ಯನಂತರ ಈ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಭಾರತ ಕಂಡಿರಲಿಲ್ಲ. 15 ರಿಂದ 19 ವರ್ಷದ ಯುವಕರಲ್ಲಿ ಶೇ45% ನಿರುದ್ಯೋಗಿಗಳಿದ್ದಾರೆ. ನಗರ ಪ್ರದೇಶದಲ್ಲಿನಿರುದ್ಯೋಗ ಪ್ರಮಾಣವು ಶೇ 37% ತಲುಲಿಪಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT