ಗುರುವಾರ , ಡಿಸೆಂಬರ್ 5, 2019
23 °C

ವಿಡಿಯೊ ವೈರಲ್‌: ಮಹಡಿಯಿಂದ ತೂರಿ ಬಂದ ₹2000 , ₹100ರ ನೋಟುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಇಲ್ಲಿನ ಖಾಸಗಿ ವಾಣಿಜ್ಯ ಸಂಕೀರ್ಣವೊಂದರ 6ನೇ ಮಹಡಿಯಿಂದ ₹2000 ಮತ್ತು ₹100ರ ಮುಖಬೆಲೆಯ ನೋಟುಗಳನ್ನು ಗಾಳಿಯಲ್ಲಿ ತೂರಲಾಗಿದೆ.

ಕೊಲ್ಕತ್ತ ನಗರದ ಮಧ್ಯಭಾಗದಲ್ಲಿರುವ ಬೆಂಟಿಂಕ್‌ ವಾಣಿಜ್ಯ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗಿದೆ. 

ಸ್ಥಳೀಯ ವ್ಯಾಪಾರಿಯೊಬ್ಬ ತನ್ನ ಮೊಬೈಲ್ ಮೂಲಕ ಈ ಘಟನೆಯನ್ನು ಚಿತ್ರೀಕರಿಸಿದ್ದು, ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. 

ಖಾಸಗಿ ಸಂಕೀರ್ಣದ ಮೇಲೆ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದಾಗ ಈ ಘಟನೆ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ನಾವು ಈ ವಾಣಿಜ್ಯ ಸಂಕೀರ್ಣದಲ್ಲಿರುವ ಇತರ ಕಚೇರಿಗಳ ಮೇಲೆ ದಾಳಿ ನಡೆಸಿದ್ದು, 6ನೇ ಮಹಡಿಯ ಹಣದ ತೂರಾಟದ ಘಟನೆಗೂ, ನಮ್ಮ ದಾಳಿಗೂ ಯಾವುದೇ ಸಂಬಂಧವಿಲ್ಲ, ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು