ಗುರುವಾರ , ಏಪ್ರಿಲ್ 9, 2020
19 °C

ಮುಂಬೈ: ಸೂಟ್‌ಕೇಸ್‌ನಲ್ಲಿ ರೂಪದರ್ಶಿ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮುಂಬೈ: ಮುಂಬೈನ ಪಶ್ಚಿಮ ಭಾಗದ ಮಲಾಡ್‌ನ ನಿರ್ಜನ ಪ್ರದೇಶದಲ್ಲಿ ಸೂಟ್‌ಕೇಸ್‌ವೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ.

ಯುವತಿಯನ್ನು 20ರ ಆಸುಪಾಸಿನಲ್ಲಿರುವ ರೂಪದರ್ಶಿ ಮಾನ್ಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ. 

ಸೋಮವಾರ ಆಕೆ ಭೇಟಿ ಮಾಡಲು ತೆರಳಿದ್ದ 20 ವರ್ಷದ ವಿದ್ಯಾರ್ಥಿ ಮುಜಮ್ಮಿಲ್ ಸಯ್ಯದ್ ಎಂಬಾತನನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ. 

ಇಬ್ಬರ ನಡುವೆಯೂ ವಾಗ್ವಾದ ನಡೆದಿದ್ದು, ಬಳಿಕ ಆತ ಮಾನ್ಸಿಯನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಶವವನ್ನು ಸೂಟ್‌ಕೇಸ್‌ನಲ್ಲಿ ಇರಿಸಿದ ಸಯ್ಯದ್, ಕ್ಯಾಬ್‌ನಲ್ಲಿ ಮಲಾಡ್‌ಗೆ ತೆರಳಿ ಆ ಸೂಟ್‌ಕೇಸ್‌ ಬಿಸಾಡಿ ತೆರಳಿದ್ದಾನೆ. ಈ ಕುರಿತು ಅನುಮಾನಗೊಂಡ ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬಹಿರಂಗವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು