ಶುಕ್ರವಾರ, ಫೆಬ್ರವರಿ 21, 2020
20 °C

ಇಡಿ ಎದುರು ಹಾಜರಾದ ಮುಂಬೈ ರಿಯಲ್ ಎಸ್ಟೇಟ್ ಉದ್ಯಮಿ ಸುಧಾಕರ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಮಹಾರಾಷ್ಟ್ರ): ಇಕ್ಬಾಲ್ ಮಿರ್ಚಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ರಿಯಲ್ ಎಸ್ಟೇಟ್ ಉದ್ಯಮಿ ಸುಧಾಕರಶೆಟ್ಟಿ ಜಾರಿನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಶುಕ್ರವಾರ ಹಾಜರಾಗಿದ್ದಾರೆ.

ದಾವೂದ್ ಇಬ್ರಾಹಿಂ ಸಹಚರನಾಗಿರುವ ಇಕ್ಬಾಲ್ ಮಿರ್ಚಿಯ ಅಕ್ರಮ ಹಣ ಹೂಡಿಕೆ ಪ್ರಕರಣದಲ್ಲಿ ಸುಧಾಕರ್ ಶೆಟ್ಟಿ ಹೆಸರು ಕೇಳಿಬಂದಿತ್ತು. ಸಹನಾ ಗ್ರೂಪ್ ಆಫ್ ಕಂಪನೀಸ್ ಮುಖ್ಯಸ್ಥರಾಗಿರುವ ಸುಧಾಕರ್ ಶೆಟ್ಟಿಗೆ ಜಾರಿ ನಿರ್ದೇಶನಾಲಯ ಕಳೆದ ವಾರ ನೋಟೀಸ್ ಜಾರಿ ಮಾಡಿತ್ತು.

ಜಾರಿನಿರ್ದೇಶನಾಲಯದ ಅಧಿಕಾರಿಗಳು ಸುಧಾಕರಶೆಟ್ಟಿ ವಿಚಾರಣೆ ನಡೆಸಲು ಅವರ ಕಚೇರಿ ಮನೆಗಳಲ್ಲಿ ಶೋಧ ನಡೆಸಿತ್ತು.

ದಾವೂದ್ ಇಬ್ರಾಹಿಂ ಸಹಚರ ಇಕ್ಬಾಲ್ ಮಿರ್ಚಿ ತನ್ನ ಕುಟುಂಬದ ಸದಸ್ಯರು, ಸಂಬಂಧಿಕರ ಹೆಸರಿನಲ್ಲಿ ಮುಂಬೈ, ದುಬೈ, ಸೇರಿದಂತೆ ವಿದೇಶಗಳಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದಾನೆ ಎಂದು ಆರೋಪವಿದೆ. ಈ ಸಂಬಂಧ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ಮಿರ್ಚಿ 10 ಆಸ್ತಿಗಳು, ಅರಬ್ ನಲ್ಲಿ ಒಂದು ವಿದೇಶದಲ್ಲಿ 25 ಆಸ್ತಿಖರೀದಿಸಿರುವ ಕುರಿತು ಮಾಹಿತಿ ಇದೆ ಎಂದು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು