ಸೋಮವಾರ, ಅಕ್ಟೋಬರ್ 21, 2019
23 °C

ಮುಂಬೈ ರೈಲಿನಲ್ಲಿ ಬೆಂಕಿ: ಪ್ರಯಾಣಿಕರು ಅಪಾಯದಿಂದ ಪಾರು

Published:
Updated:
Mumbai train

ಮುಂಬೈ: ನವೀ ಮುಂಬೈಯ ವಾಶಿ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ವ್ಯಕ್ತಿಯೊಬ್ಪರು ವಿದ್ಯುತ್‌ಚಾಲಿತ ರೈಲಿನ ಮೇಲಿರುವ  ಕೇಬಲ್ ಮೇಲೆ ಬ್ಯಾಗ್ ಬಿಸಾಡಿದ್ದರಿಂದ ರೈಲಿಗೆ ಬೆಂಕಿ ಹತ್ತಿಕೊಂಡಿದೆ. 

ಪನ್ವೇಲ್ ದಾರಿಯಾಗಿ ಸಾಗುವ ರೈಲು ವಾಶಿ ನಿಲ್ದಾಣಕ್ಕೆ ತಲುಪಿದಾಗ ಅನಾಮಿಕ ವ್ಯಕ್ತಿಯೊಬ್ಬರು ವಿದ್ಯುತ್ ರೈಲಿನ ಮೇಲಿರುವ ಕೇಬಲ್‌ಗೆ ಬ್ಯಾಗ್ ಬಿಸಾಡಿದ್ದಾರೆ. ವಿದ್ಯುತ್ ತಂತಿಗೆ ಬ್ಯಾಗ್ ತಗುಲಿ ಬೆಂಕಿ ಹತ್ತಿಕೊಂಡಿದ್ದು ತಕ್ಷಣವೇ ಬೆಂಕಿ ನಂದಿಸಲಾಗಿದೆ.  ಈ ಘಟನೆಯಲ್ಲಿ ಪ್ರಾಣಾಪಾಯವೇನೂ ಸಂಭವಿಸಿಲ್ಲ. ಸುರಕ್ಷತೆಯ ನಿಟ್ಟಿನಲ್ಲಿ ಬೋಗಿಗಳನ್ನು ತೆಗೆಯಲಾಗಿದೆ ಎಂದು ಸೆಂಟ್ರಲ್ ರೈಲ್ವೆಯ ಹಿರಿಯ ಪಿಆರ್‌ಒ  ಎಕೆ ಜೈನ್ ಹೇಳಿದ್ದಾರೆ.

ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ  ಬೆಳಗ್ಗೆ 9.28ಕ್ಕೆ ಹೊರಡಬೇಕಿದ್ದ ರೈಲು 12 ನಿಮಿಷ ವಿಳಂಬವಾಗಿದೆ.

ರೈಲು ವಿಳಂಬವಾದ ಕಾರಣ ಹೆಚ್ಚಿನ ಪ್ರಯಾಣಿಕರು  ವಾಶಿ  ನಿಲ್ದಾಣದಿಂದ ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಇನ್ನು ಕೆಲವರು ರೈಲು ಸಂಚಾರ ಪುನರಾರಂಭಗೊಳ್ಳುವ ವರಗೆ ಕಾದು ನಿಂತರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)