ದಾಭೋಲ್ಕರ್ ಹತ್ಯೆ ಪ್ರಕರಣ: ಕಾಳೆ ವಶಕ್ಕೆ ಪಡೆದ ಸಿಬಿಐ

7

ದಾಭೋಲ್ಕರ್ ಹತ್ಯೆ ಪ್ರಕರಣ: ಕಾಳೆ ವಶಕ್ಕೆ ಪಡೆದ ಸಿಬಿಐ

Published:
Updated:
Deccan Herald

ಪುಣೆ/ಮುಂಬ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆಯನ್ನು ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.

2013ರ ಆಗಸ್ಟ್ 20ರಂದು ದಾಭೋಲ್ಕರ್‌ ಅವರನ್ನು ಗುಂಡಿಕ್ಕಿ ಕೊಂದಿದ್ದ ಇಬ್ಬರು ಆರೋಪಿಗಳಿಗೆ ದ್ವಿಚಕ್ರ ವಾಹನವನ್ನು ಕಾಳೆ ಒದಗಿಸಿದ್ದ ಎಂದು ತನಿಖೆಯ ಮೂಲಗಳು ತಿಳಿಸಿವೆ.

ಈ ಹತ್ಯೆಯ ಪ್ರಮುಖ ಸಂಚುಕೋರ ವಿರೇಂದ್ರ ಸಿಂಗ್ ತಾವ್ಡೆ ಬಿಟ್ಟರೆ ಎರಡನೇ ಪ್ರಮುಖ ಸಂಚುಕೋರ ಕಾಳೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !