ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

80 ಕೋಟಿ ಜನರಿಗೆ ನವೆಂಬರ್‌ವರೆಗೂ ಅಕ್ಕಿ-ಬೇಳೆ ಉಚಿತ: ಪ್ರಧಾನಿ ಮೋದಿ ಘೋಷಣೆ
LIVE

80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಜೊತೆಗೆ ಒಂದು ಕೆಜಿ ಕಡಲೆಕಾಳನ್ನೂ ನವೆಂಬರ್‌ವರೆಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಲಡಾಖ್‌ನಲ್ಲಿ ಚೀನಾದೊಂದಿಗೆ ಗಡಿ ಸಂಘರ್ಷ ಮತ್ತು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲೇ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ದೇಶದಲ್ಲಿ ನಿರ್ಬಂಧ ಸಡಿಲಿಸುವ 'ಅನ್‌ಲಾಕ್ 2.0' ಮಾರ್ಗಸೂಚಿಯನ್ನು ನಿನ್ನೆಯಷ್ಟೇ (ಜೂನ್ 29) ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಇದರ ಜೊತೆಗೆ ಚೀನಾದ 59 ಆ್ಯಪ್‌ಗಳಿಗೆ ನಿಷೇಧ ಹೇರುವ ಮೂಲಕ ಗಡಿ ತಂಟೆಯ ವಿಚಾರದಲ್ಲಿ ಬಲ ಪ್ರಯೋಗಕ್ಕೆ ಮುಂದಾದರೆ ಕಠಿಣ ನಿರ್ಧಾರಕ್ಕೆ ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಿತ್ತು.
Last Updated 30 ಜೂನ್ 2020, 10:49 IST
ಅಕ್ಷರ ಗಾತ್ರ
10:4930 Jun 2020

ಧನ್ಯವಾದಗಳು

10:4830 Jun 2020

ನಿಮಗಾಗಿ ಸರ್ಕಾರ ಶ್ರಮಿಸುತ್ತಿದೆ. ದಯವಿಟ್ಟು ಸಹಕರಿಸಿ. ಮಾಸ್ಕ್ ಧರಿಸುವುದನ್ನು ಮರೆಯಬೇಡಿ, ಅಂತರ ಕಾಪಾಡಿಕೊಳ್ಳಿ

10:4830 Jun 2020

ನಾವು ಸತತ ಕೆಲಸ ಮಾಡುತ್ತೇವೆ. ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ಮುಂದಕ್ಕೆ ತರುತ್ತೇವೆ. ಆತ್ಮ ನಿರ್ಭರ್ ಭಾರತ ನಿರ್ಮಿಸಲು ಹಗಲಿರುಳು ಶ್ರಮಿಸುತ್ತೇವೆ

10:4830 Jun 2020

ಬಡವರ ಜೊತೆಗೆ ದೇಶದ ಎಲ್ಲ ರೈತರು ಮತ್ತು ತೆರಿಗೆ ಪಾವತಿದಾರರನ್ನು ನಮಿಸುತ್ತೇನೆ

10:4530 Jun 2020

ಇವರ ನೆರವಿನಿಂದ ದೇಶ ಮಹತ್ವದ ಮುನ್ನಡೆ ಸಾಧಿಸಿದೆ. ನೀವು ನಿಷ್ಠೆಯಿಂದ ತೆರಿಗೆ ತುಂಬಿದ್ದರಿಂದಲೇ ದೇಶದ ಬಡವರು ಇಷ್ಟು ದೊಡ್ಡ ಸಂಕಟವನ್ನು ಎದುರಿಸಲು ಸಾಧ್ಯವಾಗಿದೆ

10:4530 Jun 2020

ನಮ್ಮ ಅನ್ನದಾತರಾದ ರೈತರು ಮತ್ತು ನಿಷ್ಠಾವಂತ ತೆರಿಗೆ ಪಾವತಿದಾರರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ

10:4430 Jun 2020

ಬಡವರು ಮತ್ತು ಅಗತ್ಯವಿರುವ ಜನರಿಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ

10:4430 Jun 2020

ದೇಶದ ಎಲ್ಲರಿಗೂ ಒಂದೇ ರೇಷನ್‌ ಕಾರ್ಡ್ ಕೊಡುವ 'ಒಂದು ದೇಶ, ಒಂದು ರೇಷನ್ ಕಾರ್ಡ್' ಯೋಜನೆಯನ್ನೂ ಶೀಘ್ರ ಜಾರಿ ಮಾಡ್ತೀವಿ

10:4430 Jun 2020

ಈ ಕಾರ್ಯಕ್ಕಾಗಿ ಕೇಂದ್ರ ಸರ್ಕಾರವು 2 ಲಕ್ಷ ಕೋಟಿ ವ್ಯಯಿಸುತ್ತಿದೆ

10:4430 Jun 2020

80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಜೊತೆಗೆ ಒಂದು ಕೆಜಿ ಕಡಲೆಕಾಳನ್ನೂ ಕೊಡ್ತೀವಿ