ಮಂಗಳವಾರ, ಡಿಸೆಂಬರ್ 10, 2019
19 °C
ಪ್ರತಿಪಕ್ಷಗಳ ಬಗ್ಗೆ ಪ್ರಧಾನಿ ಶ್ಲಾಘನೆ

ಎನ್‌ಸಿಪಿ, ಬಿಜೆಡಿಯಿಂದ ಬಿಜೆಪಿಯೂ ಪಾಠ ಕಲಿಯಬೇಕು: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಬಿಜು ಜನತಾ ದಳದಿಂದ (ಬಿಜೆಡಿ) ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಪಾಠ ಕಲಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಸೋಮವಾರ ಹೇಳಿದರು.

ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಮಾತನಾಡಿದ ಅವರು ಸಂಸದೀಯ ಆದರ್ಶಗಳಿಗೆ ಬದ್ಧವಾಗಿರುವುದಕ್ಕಾಗಿ ಉಭಯ ಪಕ್ಷಗಳನ್ನು ಶ್ಲಾಘಿಸಿದರು.

ಇದನ್ನೂ ಓದಿ: ಬಿಜೆಪಿ–ಶಿವಸೇನಾ ಅವರ ದಾರಿ ನೋಡಿಕೊಳ್ಳಲಿ: ನಮ್ಮ ಹಾದಿ ನಮಗೆ ಎಂದ ಶರದ್ ಪವಾರ್

‘ಸದನದಲ್ಲಿ ಸಭಾಧ್ಯಕ್ಷರ ಪೀಠದ ಮುಂದೆ ಬಂದು ಧರಣಿ ನಡೆಸದೇ ಇರುವ ಮೂಲಕವೂ ಜನರ ಹೃದಯಗಳನ್ನು ಗೆಲ್ಲಬಹುದು. ಇಂದು ನಾನು ಎರಡು ಪಕ್ಷಗಳನ್ನು ಶ್ಲಾಘಿಸಲು ಬಯಸುತ್ತೇನೆ, ಅವುಗಳೆಂದರೆ ಎನ್‌ಸಿಪಿ ಮತ್ತು ಬಿಜೆಡಿ. ಈ ಪಕ್ಷಗಳು ಸಂಸದೀಯ ಆದರ್ಶಗಳಿಗೆ ಬದ್ಧವಾಗಿವೆ. ಈ ಪಕ್ಷಗಳ ಸದಸ್ಯರು ಎಂದಿಗೂ ಸಭಾಧ್ಯಕ್ಷರ ಪೀಠದ ಮುಂದೆ ಬಂದು ಧರಣಿ ನಡೆಸಿಲ್ಲ. ಆದರೂ ಅವರು ತಮ್ಮ ವಿಷಯಗಳನ್ನು ಪರಿಣಾಮಕಾರಿಯಾಗಿ ಮಂಡಿಸಿದ್ದಾರೆ. ಇದರಿಂದ ನನ್ನ ಬಿಜೆಪಿಯೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಪಾಠ ಕಲಿಯಬೇಕು’ ಎಂದು ಮೋದಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನಾ ಜತೆಗೂಡಿ ಸರ್ಕಾರ ರಚಿಸುವುದಕ್ಕೆ ಸಂಬಂಧಿಸಿ ಎನ್‌ಸಿಪಿ ವರಿಷ್ಠ ಶರದ್ ಪವಾರ್ ನಕಾರಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಮೋದಿ ಅವರಿಂದ ಈ ಹೊಗಳಿಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ರಾಜ್ಯಸಭೆಯು ದೂರದೃಷ್ಟಿತ್ವ ಇರುವ ಮೇಲ್ಮನೆ: 250ನೇ ಅಧಿವೇಶನದಲ್ಲಿ ಪ್ರಧಾನಿ ಮೋದಿ

‘ಬಿಜೆಪಿ–ಶಿವಸೇನಾ ಚುನಾವಣೆಯಲ್ಲಿ ಜತೆಯಾಗಿ ಸ್ಪರ್ಧಿಸಿವೆ. ಎನ್‌ಸಿಪಿ–ಕಾಂಗ್ರೆಸ್ ಜತೆಯಾಗಿ ಸ್ಪರ್ಧಿಸಿದ್ದೇವೆ. ಹೀಗಾಗಿ ಅವರ ದಾರಿ ಅವರು ನೋಡಿಕೊಳ್ಳಲಿ. ನಮ್ಮ ರಾಜಕೀಯ ನಾವು ಮಾಡುತ್ತೇವೆ’ ಎಂದು ಸಂಸತ್ ಭವನದಲ್ಲಿ ಶರದ್ ಪವಾರ್ ಸೋಮವಾರ ಮಧ್ಯಾಹ್ನ ಹೇಳಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು