ಶುಕ್ರವಾರ, ಅಕ್ಟೋಬರ್ 18, 2019
27 °C

ಇದು ನ್ಯಾಯವಲ್ಲ ಮೋದಿಜೀ, ನೆರೆ ಪರಿಹಾರಕ್ಕಾಗಿ ಟ್ವೀಟ್ ಕೂಗು

Published:
Updated:

ಬೆಂಗಳೂರು: ಕಾಶ್ಮೀರದಲ್ಲಿನ ಸಮಸ್ಯೆ, ಕೋಲ್ಕತ್ತಾದ ಎನ್‌ಆರ್‌ಸಿ, ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮತ್ತು  ಯುವ ಬ್ರಿಗೇಡ್‌ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ  ಟ್ವೀಟ್ ವಾರ್ ಒಂದೆಡೆಯಾದರೆ ಕರ್ನಾಟಕಕ್ಕೆ ನೆರೆ ಪರಿಹಾರ ಕೊಡಿ ಎಂಬ ಬೇಡಿಕೆಯನ್ನೊಡ್ಡಿರುವ ಟ್ವೀಟಿಗರು  #NotFairModiji (ಇದು ನ್ಯಾಯವಲ್ಲ) ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ. 

ಸದ್ಯ #NotFairModiji ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ.

ಇದನ್ನೂ ಓದಿ: ನೆರೆ ಪರಿಹಾರ ವಿಳಂಬ:ಕೇಂದ್ರ ಸಚಿವ ಡಿವಿಎಸ್‌ ವಿರುದ್ಧ ಸೂಲಿಬೆಲೆ ಗುಡುಗು

ಮೋದಿಯವರಿಗೆ ಮತ ಹಾಕುವುದಕ್ಕಾಗಿ ಈ ಯುವ ಚೌಕೀದಾರರು ಬೆಂಗಳೂರಿನಿಂದ ರಾತ್ರಿ ರೈಲು ಹತ್ತಿ ಉತ್ತರ ಕರ್ನಾಟಕಕ್ಕೆ ಬಂದಿದ್ದರು. ಈಗ ಅವರ ಕುಟುಂಬ ಎಲ್ಲವನ್ನೂ ಕಳೆದುಕೊಡಿದೆ. ಜನರು ಆತ್ಮಹತ್ಯೆ ಮಾಡುತ್ತಿದ್ದಾರೆ. ಹೀಗಿರುವಾಗಲೂ ನಾಯಕ ಚೌಕೀದಾರರಾದ ನೀವು ಅವರಿಗೆ ಸಹಾಯ ಮಾಡಲು ತಯಾರಿಲ್ಲ #NotFairModiji   #WeWantFloodRelief (ನಮಗೆ ಪರಿಹಾರ ಬೇಕು)  ಎಂದು  ಲೋಕೇಶ್ ಎಂಬ ಟ್ವೀಟಿಗ ಟ್ವೀಟಿಸಿದ್ದಾರೆ.

ಅದೇ ವೇಳೆ ಕೇಂದ್ರ ಸಚಿವ ಸದಾನಂದ ಗೌಡ ಅವರು ಚಕ್ರವರ್ತಿ ಸೂಲಿಬೆಲೆ ಅವರನ್ನು ಟ್ವಿಟರ್‌ನಲ್ಲಿ ಬ್ಲಾಕ್ ಮಾಡಿದ್ದನ್ನು ಪ್ರಶ್ನಿಸಿ  ರಾಜೇಶ್ ಶೆಣೈ ಎಂಬ ಟ್ವೀಟಿಗ #NotFairModiji ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸಕಾಲಕ್ಕೆ ಬಾರದ ಪರಿಹಾರ ಯಾವ ಪುರಷಾರ್ಥಕ್ಕೆ?: ಸೂಲಿಬೆಲೆ ಆಕ್ರೋಶ

ಸದಾನಂದ ಗೌಡರು ಸೂಲಿಬೆಲೆಯನ್ನು ದೇಶದ್ರೋಹಿ ಎಂದು ಹೇಳಿದ್ದನ್ನು ಖಂಡಿಸಿ ಹಲವಾರು ಟ್ವೀಟಿಗರು #StopUrArroganceDVS ಎಂಬ ಹ್ಯಾಶ್‌ಟ್ಯಾಗ್‌ನ್ನೂ ಟ್ರೆಂಡ್ ಮಾಡಿದ್ದಾರೆ.

 ಇದರ ಜತೆಗೆ ಕೊಲ್ಕತ್ತಾದಲ್ಲಿ ನೆಲೆಸಿರುವ ಮುಸ್ಲಿಂ ವಲಸೆಗಾರರನ್ನು ಹೊರದಬ್ಬುವುದಾಗಿ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿರುವ ಟ್ವೀಟ್‌ಗೂ #NotFairModiji ಎಂಬ  ಹ್ಯಾಶ್‌ಟ್ಯಾಗ್  ಬಳಕೆಯಾಗಿದೆ.

ಕಾಶ್ಮೀರ ಸಮಸ್ಯೆ

ಪಿಎಂಸಿ ಬ್ಯಾಂಕ್ ಬಗ್ಗೆ

Post Comments (+)