ಇಮ್ರಾನ್‌ ಖಾನ್‌ ಪ್ರಮಾಣವಚನ: ಆಹ್ವಾನ ಸ್ವೀಕರಿಸಿದ ನವಜೋತ್‌ ಸಿಂಗ್‌ ಸಿಧು

7

ಇಮ್ರಾನ್‌ ಖಾನ್‌ ಪ್ರಮಾಣವಚನ: ಆಹ್ವಾನ ಸ್ವೀಕರಿಸಿದ ನವಜೋತ್‌ ಸಿಂಗ್‌ ಸಿಧು

Published:
Updated:

ನವದೆಹಲಿ: ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವಂತೆ ಪಾಕಿಸ್ತಾನ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಅವರು ನೀಡಿದ ಆಹ್ವಾನ ಸ್ವೀಕರಿಸಿರುವ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು, ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ.

ಖಾನ್‌ ಆಹ್ವಾನಕ್ಕೆ, ‘ಇದೊಂದು ದೊಡ್ಡ ಗೌರವ. ನಾನು ಆಹ್ವಾನವನ್ನು ಸ್ವೀಕರಿಸಿದ್ದೇನೆ. ಬುದ್ಧಿವಂತಿಕೆಯುಳ್ಳವರು ಮೆಚ್ಚುಗೆ ಗಳಿಸುತ್ತಾರೆ. ಅಧಿಕಾರ ಹೊಂದಿರುವವರು ಭಯದಲ್ಲಿರುತ್ತಾರೆ. ಆದರೆ ಚಾರಿತ್ರ್ಯ ಹೊಂದಿರುವವರು ವಿಶ್ವಾಸಾರ್ಹರಾಗಿರುತ್ತಾರೆ. ಖಾನ್‌ ಅಂತಹ ಚಾರಿತ್ರ್ಯ ಹೊಂದಿದ್ದಾರೆ. ಅವರ ಮೇಲೆ ವಿಶ್ವಾಸ ಇರಿಸಬಹುದು. ಕ್ರೀಡಾಪಟುಗಳು ಸೇತುವೆ ನಿರ್ಮಿಸುತ್ತಾರೆ. ತಡೆಗೋಡೆಗಳನ್ನು ಉರುಳಿಸುತ್ತಾರೆ. ಜನರನ್ನು ಒಗ್ಗೂಡಿಸುತ್ತಾರೆ’ ಎಂದು  ಸಿಧು ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ ಸಿಧು ಮತ್ತು ಖಾನ್‌ ಇಬ್ಬರೂ ಮಾಜಿ ಕ್ರಿಕೆಟಿಗರು.

ಇಮ್ರಾನ್‌ ಖಾನ್‌ ಆಗಸ್ಟ್‌ 11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ವೇಳೆ ಪಾಲ್ಗೊಳ್ಳುವಂತೆ ಸಿಧು ಸೇರಿದಂತೆ ದೇಶದ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಬಾಲಿವುಡ್‌ ನಟ ಅಮೀರ್‌ಖಾನ್‌, ಮಾಜಿ ಕ್ರಿಕೆಟಿಗರಾದ ಸುನೀಲ್‌ ಗವಾಸ್ಕರ್‌ ಹಾಗೂ ಕಪಿಲ್‌ದೇವ್‌ ಅವರಿಗೂ ಬುಧವಾರ ಆಹ್ವಾನ ಬಂದಿದೆ.

ಜುಲೈ 25ರಂದು ಪಾಕಿಸ್ತಾನ ರಾಷ್ಟ್ರೀಯ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !