ಭಾನುವಾರ, ನವೆಂಬರ್ 17, 2019
24 °C

ಬಿಬಿಸಿ ಹೊಸ ಸರಣಿ: ಮುಂಬೈಯ ‘ಬೈಸಿಕಲ್‌ ಮೇಯರ್‌’ ಫಿರೋಜಾ ಕಾರ್ಯಕ್ರಮ ಪ್ರಸಾರ

Published:
Updated:

ಲಂಡನ್‌: ‘ಬೈಸಿಕಲ್‌ ಮೇಯರ್‌’ ಎಂದೇ ಹೆಸರುವಾಸಿಯಾಗಿರುವ ಮುಂಬೈಯ ಫಿರೋಜಾ ಸುರೇಶ್‌ ಅವರ ಕುರಿತ ಕಾರ್ಯಕ್ರಮ ಬಿಬಿಸಿಯ ಹೊಸ ಸರಣಿಯಲ್ಲಿ ಪ್ರಸಾರವಾಗಲಿದೆ. ಜಾಗತಿಕ ಸಂಪರ್ಕ ಕುರಿತ ಕಿರು ಸರಣಿಯ ಭಾಗವಾಗಿ ಈ ವಾರದಿಂದ ವಿಶ್ವದಾದ್ಯಂತ ಇದು ಪ್ರಸಾರವಾಗಲಿದೆ.

ದೆಹಲಿಯಲ್ಲಿ ಉಂಟಾಗಿರುವ ಮಾಲಿನ್ಯದ ಮಧ್ಯೆ ‘ಮೇಡ್‌ ಆನ್‌ ಅರ್ಥ್‌’ ಎಂಬ ಈ ಕಾರ್ಯಕ್ರಮದಲ್ಲಿ ಮುಂಬೈಯ ಬೈಸಿಕಲ್‌ ಮೇಯರ್‌ ಅವರ ವಿಶಿಷ್ಟ ವಿಧಾನವು ದೇಶದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಭರವಸೆ ಮೂಡಿಸಲಿದೆ ಎಂಬುದನ್ನು ನಿರೂಪಕರು ತೋರ್ಪಡಿಸಿದ್ದಾರೆ.

‘ದೆಹಲಿಯಲ್ಲಿ ಮಾಲಿನ್ಯ ಬಿಕ್ಕಟ್ಟು ಎದುರಾಗಲು ವಾಹನಗಳ ಹೊರಸೂಸುವಿಕೆಯ ಕೊಡುಗೆ ಹೆಚ್ಚಿದೆ. ಬೈಸಿಕಲ್‌ನಂಥ ಹೆಚ್ಚು ಪರಿಸರ ಸ್ನೇಹಿ ಸಾರಿಗೆ ಆಯ್ಕೆಗಳು ಎಂದಿಗಿಂತಲೂ ಈಗ ಮುಕ್ಯವಾಗಿವೆ’ ಎಂದು ನಿರೂಪಕ ಫಿನ್‌ ಅಬರ್ಡೀನ್‌ ಹೇಳಿದ್ದಾರೆ.

‘ಫಿರೋಜಾ ಸುರೇಶ್‌ ಅವರು ಸೈಕ್ಲಿಂಗ್‌ ಬಗ್ಗೆ ಭಾರತೀಯರು ಹೊಂದಿರುವ ಕಾಳಜಿ ಮತ್ತು ಅದರ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸ್ಥಳೀಯರನ್ನು ಪ್ರೋತ್ಸಾಹಿಸಲು ಅವರು ಶ್ರಮಿಸುತ್ತಿರುವುದನ್ನು ಹೊಸ ಸರಣಿಯಲ್ಲಿ ತೋರಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)