ಶನಿವಾರ, ಸೆಪ್ಟೆಂಬರ್ 19, 2020
21 °C

ನೀತಿ ಆಯೋಗದ ಸಮಿತಿಯಲ್ಲಿ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಚೇತರಿಕೆ ನೀಡುವುದು, ಕೃಷಿ ಮಾರುಕಟ್ಟೆ ಮತ್ತು ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆ ಹೆಚ್ಚಿಸುವುದಕ್ಕಾಗಿ ಸಲಹೆಗಳನ್ನು ನೀಡಲು ನೀತಿ ಆಯೋಗವು ಮುಖ್ಯಮಂತ್ರಿಗಳ ಸಮಿತಿಯನ್ನು ರಚಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಸಮಿತಿಯ ಸಂಚಾಲಕರು. ಎಚ್‌.ಡಿ.ಕುಮಾರಸ್ವಾಮಿ (ಕರ್ನಾಟಕ), ಕಮಲ್‌ ನಾಥ್ (ಮಧ್ಯಪ್ರದೇಶ), ಮನೋಹರ ಲಾಲ್‌ ಖಟ್ಟರ್ (ಹರಿಯಾಣ), ಯೋಗಿ ಆದಿತ್ಯನಾಥ (ಉತ್ತರ ಪ್ರದೇಶ), ಪೆಮಾ ಖಂಡು (ಅರುಣಾಚಲ ಪ್ರದೇಶ), ವಿಜಯ್ ರೂಪಾಣಿ (ಗುಜರಾತ್‌) ಸಮಿತಿಯ ಸದಸ್ಯರು.

ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್ ಅವರೂ ಸದಸ್ಯರಾಗಿದ್ದರೆ, ನೀತಿ ಆಯೋಗದ ಸದಸ್ಯ ರಮೇಶ್‌ ಚಂದ್ರ ಅವರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು