ಸೋಮವಾರ, ಮಾರ್ಚ್ 8, 2021
22 °C

ಸರಸ್ವತಿ ಪೂಜೆ ದಿನ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ್: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಶಾಲೆಯೊಂದರಲ್ಲಿ ಕಳೆದ ವಾರ ಸರಸ್ವತಿ ಪೂಜೆ ಸಂಭ್ರಮದ ವೇಳೆ ಬೇರೆ ಶಾಲೆಯ ವಿದ್ಯಾರ್ಥಿಯೊಬ್ಬ 8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದು, ಪ್ರಕರಣ ದಾಖಲಾಗಿದೆ.

ಫೆಬ್ರುವರಿ 10ರಂದು ಇಲ್ಲಿನ ಶಾಲೆಯೊಂದರಲ್ಲಿ ಸರಸ್ವತಿ ಪೂಜೆ ನಡೆದಿದ್ದು, ಆ ದಿನ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಈ ಘಟನೆ  ಬಗ್ಗೆ ಮಂಗಳವಾರ ಸಂಜೆ ನಮಗೆ ದೂರು ಲಭಿಸಿದೆ ಎಂದಿದ್ದಾರೆ ಪೊಲೀಸರು.

ಅತ್ಯಾಚಾರ ಸಂತ್ರಸ್ತೆ ಫೆ.11ರಂದು ಮನೆಯವರ ಮುಂದೆ ಅತ್ಯಾಚಾರದ ವಿಷಯವನ್ನು ಹೇಳಿದ್ದಾಳೆ ಎಂದು ಬರಿಪದ  ಸದಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ  ಸ್ವರ್ಣಲಲಾ ಮಿಂಜ್ ಹೇಳಿದ್ದಾರೆ.

ಆರೋಪಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಬಾಲಕಿಯ ಅತ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ವಿರುದ್ಧ  ಐಪಿಸಿ  341, 376 (3), 506 ಸೆಕ್ಷನ್ ಅಡಿಯಲ್ಲಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಇದುವರೆಗೆ ಬಂಧಿಸಿಲ್ಲ ಎಂದು ಮಿಂಜ್ ಹೇಳಿದ್ದಾರೆ

ಶಾಲೆಯ ಶೌಚಾಲಯಕ್ಕೆ ಹೋಗಿದ್ದಾಗ ಇನ್ನೊಂದು ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಬೇಲಿ ಹಾರಿ ಬಂದು ಅತ್ಯಾಚಾರವೆಸಗಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ಥೆ ಹೇಳಿದ್ದಾಳೆ. ಈಕೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು