ಮಂಗಳವಾರ, ಫೆಬ್ರವರಿ 18, 2020
17 °C

ಜೂನ್ 1ರೊಳಗೆ ‘ಒಂದು ದೇಶ, ಒಂದು ಪಡಿತರ ಚೀಟಿ’ ಜಾರಿ: ರಾಮ್ ವಿಲಾಸ್ ಪಾಸ್ವಾನ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಪಾಟ್ನಾ: ‘ಒಂದು ದೇಶ, ಒಂದು ಪಡಿತರ ಚೀಟಿ’ ಯೋಜನೆಯನ್ನು ಜೂನ್ 1ರ ಒಳಗೆ ದೇಶದಾದ್ಯಂತ ಜಾರಿ ಮಾಡಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಘೋಷಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಒಂದೇ ಪಡಿತರ ಚೀಟಿ ಬಳಸಿ ದೇಶದ ಯಾವುದೇ ಭಾಗದಲ್ಲಿ ಫಲಾನುಭವಿಗಳು ಸೌಲಭ್ಯ ಪಡೆಯಬಹುದಾಗಿದೆ’ ಎಂದು ಹೇಳಿದರು.

ಕಳೆದ ಡಿಸೆಂಬರ್ 3ರಂದು ಈ ಕುರಿತು ಮಾಹಿತಿ ನೀಡಿದ್ದ ಪಾಸ್ವಾನ್, ಜೂನ್ 30ರ ಒಳಗೆ ‘ಒಂದು ದೇಶ, ಒಂದು ಪಡಿತರ ಚೀಟಿ’ ಯೋಜನೆ ಜಾರಿಯಾಗಲಿದೆ ಎಂದಿದ್ದರು. ಅವರ ಹೊಸ ಹೇಳಿಕೆಯು ಯೋಜನೆಯು ಒಂದು ತಿಂಗಳು ಮೊದಲೇ ಅನುಷ್ಠಾನಕ್ಕೆ ಬರುವ ಮುನ್ಸೂಚನೆ ನೀಡಿದೆ.

 

ಇನ್ನಷ್ಟು...

ಸಂಪಾದಕೀಯ | ಒಂದು ದೇಶ, ಒಂದು ಪಡಿತರ: ಆಹಾರ ಭದ್ರತೆಯತ್ತ ಮತ್ತೊಂದು ಹೆಜ್ಜೆ 

ಒಂದು ದೇಶ ಒಂದು ಪಡಿತರ: ಜನವರಿ 1ರಿಂದ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಜಾರಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು