ಸೋಮವಾರ, ಜನವರಿ 20, 2020
19 °C

ಇಮ್ರಾನ್‌ ಖಾನ್‌ಗೆ ಅಸಾದುದ್ದೀನ್‌ ತರಾಟೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ’ನೀವು ಪಾಕಿಸ್ತಾನದ ಬಗ್ಗೆ ಚಿಂತಿಸಿ, ನಮ್ಮ ಬಗ್ಗೆ ಚಿಂತಿಸಬೇಡಿ’ ಎಂದು ಪಾಕಿಸ್ತಾನದ
ಪ್ರಧಾನಿ ಇಮ್ರಾನ್‌ ಖಾನ್‌ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ತಿರುಗೇಟು ನೀಡಿದ್ದಾರೆ. 

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ಸುಳ್ಳು ಪ್ರತಿಭಟನೆಯ ವಿಡಿಯೊವನ್ನು ಇಮ್ರಾನ್‌ ಖಾನ್‌ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. 

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಿಸಿದ ಓವೈಸಿ, ‘ನಾವು ಭಾರತದ ಹೆಮ್ಮೆಯ ಮುಸ್ಲಿಮರು. ಯಾವುದೇ ಅಧಿಕಾರ, ನನ್ನಿಂದ ದೇಶಪ್ರೇಮ, ಧರ್ಮವನ್ನು  ಬೇರ್ಪಡಿಸಲು ಸಾಧ್ಯವಿಲ್ಲ. ನೀವು ಮೊದಲು ಪಾಕಿಸ್ತಾನದಲ್ಲಿರುವ ಸಿಖ್ಖ್‌ರನ್ನು ರಕ್ಷಿಸಿ, ಗುರುದ್ವಾರದ ಮೇಲೆ ದಾಳಿ ನಡೆಸಿದವರನ್ನು ಕಂಡುಹಿಡಿಯಿರಿ’ ಎಂದು ಗುಡುಗಿದರು. 

ಪ್ರಧಾನಿ ಮೋದಿ ವಿರುದ್ಧ ಓವೈಸಿ ಗರಂ: ಉತ್ತರಪ್ರದೇಶದಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ನಷ್ಟವನ್ನು ತುಂಬಿಕೊಡುವಂತೆ ನೋಟಿಸ್‌ ನೀಡಲಾಗಿದೆ.

ಹರಿಯಾಣದಲ್ಲಿ ಜಾಟ್‌ ಆಂದೋಲನದ ವೇಳೆ ₹2 ಸಾವಿರ ಕೋಟಿ ನಷ್ಟ ಉಂಟಾಗಿತ್ತು. ಈ ಪ್ರತಿಭಟನೆ ವೇಳೆ ಆದ ನಷ್ಟಕ್ಕೆ  ಪ್ರತಿಭಟನಕಾರರಿಂದ ಎಷ್ಟುಹಣ ಸಂಗ್ರಹಿಸಿದ್ದೀರಾ? ಅವರು ಮುಸ್ಲಿಮರಲ್ಲ ಎಂಬ ಕಾರಣಕ್ಕೆ ನೀವು ಹಣ ಸಂಗ್ರಹಿಸಿಲ್ಲ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಅಲ್ಲವೇ? ಎಂದು ಮೋದಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. 

ಬಾಂಗ್ಲಾದೇಶ, ಅಫ್ಗಾನಿಸ್ತಾನದ ಹಿಂದೂ, ಸಿಖ್ಖ್‌ರಿಗೆ ಪೌರತ್ವ ನೀಡುವುದಕ್ಕೆ ನಮ್ಮ ಅಕ್ಷೇಪ ಇಲ್ಲ. ಆದರೆ ನೀವು ಧರ್ಮದ ಹೆಸರಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಸಿಎಎ ಕೇವಲ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ರೂಪಿಸಿದ ಸಂಚು ಎಂದು ಅಸಾದುದ್ದೀನ್‌ ಹೇಳಿದರು.  ಜನವರಿ10ರಂದು ಹೈದರಾಬಾದ್‌ನಲ್ಲಿ ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಇದೇ ವೇಳೆ ಪ್ರಕಟಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು