ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾಕೋಟ್‌ ದಾಳಿಯ ನಂತರ ರಕ್ಷಣಾ ನಾಯಕತ್ವದ ಆಲೋಚನೆ ಬದಲಾಗಿದೆ: ಧನೋವಾ

Last Updated 26 ಫೆಬ್ರುವರಿ 2020, 4:24 IST
ಅಕ್ಷರ ಗಾತ್ರ

ನವದೆಹಲಿ: ‘ಕಳೆದ ಒಂದು ವರ್ಷದಲ್ಲಿನಾವು ಸಾಕಷ್ಟು ಪಾಠ ಕಲಿತಿದ್ದೇವೆ’ ಎಂದು ಬಾಲಾಕೋಟ್ ವಾಯುದಾಳಿ ನಡೆದ ವೇಳೆ ವಾಯುಪಡೆಯ ಮುಖ್ಯಸ್ಥರಾಗಿದ್ದ ಏರ್‌ ಚೀಫ್ ಮಾರ್ಷಲ್ (ನಿವೃತ್ತ) ಬೀರೆಂದರ್ ಸಿಂಗ್ಧನೋವಾ ಹೇಳಿದ್ದಾರೆ.

‘ಬಾಲಾಕೋಟ್ ದಾಳಿಗೆ ಒಂದು ವರ್ಷ ಕಳೆದಿದೆ. ನಾವು ತೃಪ್ತಿಯಿಂದ ಹಿಂದಿರುಗಿ ನೋಡುತ್ತೇವೆ. ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಬಾಲಾಕೋಟ್ ದಾಳಿಯ ನಂತರ ಹಲವು ಬದಲಾವಣೆಗಳು ಆಗಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ದಾಳಿ ಮತ್ತು ರಕ್ಷಣಾ ಕಾರ್ಯಾಚರಣೆಗಳ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪಾಕಿಸ್ತಾನದ ಒಳಪ್ರದೇಶದಲ್ಲಿದ್ದ ಭಯೋತ್ಪಾದಕರ ನೆಲೆಯ ಮೇಲೆ ನಾವು ದಾಳಿ ನಡೆಸಿ, ಭಯೋತ್ಪಾದನಾ ತರಬೇತಿ ಶಿಬಿರವನ್ನು ನೆಲಸಮ ಮಾಡಬಹುದು ಎಂದು ನಮ್ಮ ಎದುರಾಳಿಗಳು ಊಹಿಸಿರಲಿಲ್ಲ’ ಎಂದು ಹೇಳಿದ್ದಾರೆ.

‘ನಾವು ಪಾಕ್ ಗಡಿ ಪ್ರವೇಶಿಸದೆಯೇ ಅವರ ಮೇಲೆ ದಾಳಿ ನಡೆಸಬಹುದಿತ್ತು. ಆದರೂ ಗಡಿಯೊಳಗೆ ನುಗ್ಗಿ ದಾಳಿ ಮಾಡುವ ನಿರ್ಧಾರ ತೆಗೆದುಕೊಂಡೆವು.ನಮ್ಮ ದೇಶಕ್ಕೆ ಬಂದು ನೀವು ಗಲಾಟೆ ಮಾಡಿದರೆ, ನಿಮ್ಮ ದೇಶದೊಳಗೆ ನುಗ್ಗಿ ನಾವು ಹೊಡೆಯುತ್ತೇವೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ಕೊಡಬೇಕಿತ್ತು. ಬಾಲಾಕೋಟ್ ದಾಳಿಯಿಂದ ಅದು ಯಶಸ್ವಿಯಾಯಿತು’ ಎಂದು ನುಡಿದರು.

ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ದಾಳಿ ನಡೆಸಿ ಇಂದಿಗೆ (ಫೆ.26) ಒಂದು ವರ್ಷವಾಯಿತು. ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಬಸ್‌ ಸ್ಫೋಟಿಸಿ 40 ಯೋಧರ ಸಾವಿಗೆ ಕಾರಣವಾಗಿದ್ದ ಪಾಕ್‌ ಉಗ್ರರ ದುಷ್ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ವಾಯುಪಡೆ ಈ ದಾಳಿ ಸಂಘಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT