ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕ ರಕ್ಷಣಾ ಮಸೂದೆಗೆ ರಾಜ್ಯಸಭೆ ಅಂಗೀಕಾರ

Last Updated 6 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಗ್ರಾಹಕ ರಕ್ಷಣಾ ಮಸೂದೆ 2019 ಮಂಗಳವಾರ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ.

ಗ್ರಾಹಕರ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸಲು ಈ ಮಸೂದೆ ಅನುವು ಮಾಡಿಕೊಡಲಿದೆ. ಗ್ರಾಹಕರು ಖರೀದಿ
ಸುವ ಸರಕುಗಳಲ್ಲಿ ದೋಷಗಳಿದ್ದರೆ ಅಥವಾ ಸೇವೆಯಲ್ಲಿ ಲೋಪವಾದರೆ ಅವುಗಳನ್ನು ಸಮರ್ಥವಾಗಿ ಬಗೆಹರಿಸುವ ವ್ಯವಸ್ಥೆ ಕಲ್ಪಿಸಲು ಮಸೂದೆಯಲ್ಲಿ ಪ್ರಾಮುಖ್ಯ ನೀಡಲಾಗಿದೆ.

ಗ್ರಾಹಕರ ಹಕ್ಕುಗಳಿಗೆ ಮತ್ತಷ್ಟು ಬಲ

* ಎಲ್ಲಾ ಸ್ವರೂಪದ ಸರಕು ಮತ್ತು ಸೇವೆಗಳ ವ್ಯಾಪ್ತಿಗೆ ಟೆಲಿಮಾರ್ಕೆಟಿಂಗ್ ಮತ್ತು ಮನೆ ನಿರ್ಮಾಣ ಸೇವೆಗಳನ್ನೂ ತರಲಾಗಿದೆ

* ಉತ್ಪನ್ನ/ಸೇವೆಯಿಂದ ಆಗುವ ಹಾನಿ/ಪರಿಣಾಮಗಳಿಗೆ ತಯಾರಕ, ಸೇವಾದಾರ ಮತ್ತು ಮಾರಾಟಗಾರನನ್ನು ಹೊಣೆ ಮಾಡಲಾಗುತ್ತದೆ. 1986ರ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿರಲಿಲ್ಲ

* ಗ್ರಾಹಕರ ವ್ಯಾಜ್ಯಗಳ ಪರಿಹಾರಕ್ಕೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಧ್ಯಸ್ಥಿಕೆ ಕೇಂದ್ರಗಳ ಸ್ಥಾಪನೆ

* ಗ್ರಾಹಕರ ಹಕ್ಕುಗಳ ಅನುಷ್ಠಾನ, ಪಾಲನೆಗೆ ಉತ್ತೇಜನ ಮತ್ತು ರಕ್ಷಣೆಗಾಗಿ ಕೇಂದ್ರೀಯ ಗ್ರಾಹಕರ ರಕ್ಷಣಾ ಪ್ರಧಿಕಾರ ರಚನೆ

₹ 25,000ದಿಂದ ₹ 1ಲಕ್ಷ

ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿ/ಕಂಪನಿಗೆ ವಿಧಿಸಬಹುದಾದ ದಂಡ. (1986ರ ಕಾಯ್ದೆಯಲ್ಲಿ ಇದು ₹ 2,000ದಿಂದ ₹ 10,000ದವರೆಗೆ ಮಾತ್ರ ದಂಡ ವಿಧಿಸಬಹುದಿತ್ತು)

ಕೇಂದ್ರಕ್ಕೇ ಪರಮಾಧಿಕಾರ

1986ರ ಕಾಯ್ದೆ ಮತ್ತು 2018ರ ಮಸೂದೆ ಪ್ರಕಾರಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ನೇಮಕಾತಿ ಅಧಿಕಾರ

**

ಇ–ಕಾಮರ್ಸ್‌ಗೆ ಮೂಗುದಾರ

1986ರ ಕಾಯ್ದೆಗೆ ಹಲವು ತಿದ್ದುಪಡಿಗಳನ್ನು ತರಲಾಗಿತ್ತು. ಆದರೆ, ‘ಇ–ಕಾಮರ್ಸ್’ ಈ ಕಾಯ್ದೆಯ ವ್ಯಾಪ್ತಿಯಲ್ಲಿ ಇರಲಿಲ್ಲ. 2018ರ ಮಸೂದೆಯಲ್ಲಿ ಇ–ಕಾಮರ್ಸ್ ಅನ್ನು ಇದರ ವ್ಯಾಪ್ತಿಗೆ ತರಲಾಗಿದೆ. ನೇರ ಮಾರಾಟ ಮತ್ತು ಆನ್‌ಲೈನ್ ವ್ಯಾಪಾರದ ಸ್ವರೂಪವನ್ನು ಈ ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ವಹಿವಾಟುಗಳಿಗೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರವೇ ರೂಪಿಸಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT