ಭಾನುವಾರ, ಏಪ್ರಿಲ್ 5, 2020
19 °C
ಕೊರೊನಾ ವೈರಸ್‌ ನಿಯಂತ್ರಣಕ್ಕೆ ವಿಶೇಷ ಪ್ಯಾಕೆಜ್‌ ಘೋಷಣೆಗೆ ಒತ್ತಾಯ

ಸಂಸತ್‌ ಅಧಿವೇಶನ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಂಸತ್ತಿನ ಉಭಯ ಸದನಗಳ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಸೋಮವಾರ ಯಾವುದೇ ಚರ್ಚೆ ಇಲ್ಲದೆಯೇ ಹಣಕಾಸು ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದ ಬಳಿಕ ಅಧಿವೇಶನವನ್ನು ಮುಂದೂಡಲಾಯಿತು.

ಈ ಮೊದಲು ಏಪ್ರಿಲ್‌ 3ರವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್‌–19ರಿಂದಾಗಿ ಅಧಿವೇಶನ ಮುಂದೂಡುವ ನಿರ್ಧಾರ ಕೈಗೊಳ್ಳಲಾಯಿತು. ಕೊರೊನಾ ವೈರಸ್‌ ಭೀತಿಯಿಂದಾಗಿ ಟಿಎಂಸಿ, ಶಿವಸೇನಾ, ತೃಣಮೂಲ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಸೇರಿದಂತೆ ಹಲವು ಪಕ್ಷಗಳು ಅಧಿವೇಶನಕ್ಕೆ ಹಾಜರಾಗದಿರಲು ನಿರ್ಧರಿಸಿದ್ದವು.

ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಹಾಗೂ ಇದರಿಂದ ಸೃಷ್ಟಿಯಾಗಿರುವ ಸವಾಲುಗಳನ್ನು ಎದುರಿಸಲು ವಿಶೇಷ ಪ್ಯಾಕೆಜ್‌ ಘೋಷಿಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಒತ್ತಾಯಿಸಿದರು.

ರಾಜ್ಯಸಭೆಯಲ್ಲೂ ಸೋಮವಾರದ ಕಲಾಪಗಳು ಮುಕ್ತಾಯಗೊಂಡ ಬಳಿಕ ಅಧಿವೇಶನವನ್ನು ಮುಂದೂಡಲಾಯಿತು.

ರಜೆ ಕೋರಿದ ಮನಮೋಹನ್‌ ಸಿಂಗ್‌: ಇದಕ್ಕೂ ಮುನ್ನ, ಅನಾರೋಗ್ಯದ ಕಾರಣ ಮಾರ್ಚ್‌ 19ರಿಂದ ಪ್ರಸ್ತುತ ಅಧಿವೇಶನದ ಉಳಿದ ಅವಧಿಯವರೆಗೆ ರಜೆ ನೀಡುವಂತೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಮನಮೋಹನ್‌ ಸಿಂಗ್‌ ಕೋರಿಕೆಗೆ ಸದನ ಅನುಮೋದನೆ ನೀಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)