ಬುಧವಾರ, ಏಪ್ರಿಲ್ 8, 2020
19 °C

ಬಾಲ್ಯದ ಗೆಳತಿ ಜೊತೆ ಸಪ್ತಪದಿ ತುಳಿದ ಹಾರ್ದಿಕ್ ಪಟೇಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಪಾಟೀದಾರ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ತಮ್ಮ ಬಾಲ್ಯದ ಗೆಳತಿ ಕಿಂಜಾಲ್ ಪರಿಕ್ ಜೊತೆ ಗುಜರಾತಿನ ದಿಗ್ಸಾರ್ ಜಿಲ್ಲೆಯ ಸುರೇಂದ್ರ ನಗರದ ದೇವಾಲಯದಲ್ಲಿ ಸರಳ ವಿವಾಹವಾಗಿದ್ದಾರೆ. 

ವಿವಾಹವು ಪಟೇಲ್ ಸಮುದಾಯದ ಸಂಪ್ರದಾಯದಂತೆ ಜರುಗಿತು. 2016ರಲ್ಲಿಯೇ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು.

ಕಿಂಜಾಲ್ ಪರಿಕ್ ಪದವಿ ಮುಗಿಸಿದ್ದು, ಗಾಂಧಿನಗರದಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ. ಮೂಲತಃ ವಿರಾಮ್‌ಘಮ್‌ದವರಾದ ಪರಿಕ್‌ ಕುಟುಂಬ ಇದೀಗ ಸೂರತ್‌ನಲ್ಲಿ ನೆಲೆಸಿದೆ. 

ವಿವಾಹದಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರು ಸೇರಿದಂತೆ ಕೇವಲ 100 ಮಂದಿ ಭಾಗವಹಿಸಿದ್ದರು. 


ಬಾಲ್ಯದ ಗೆಳತಿ ಕಿಂಜಾಲ್ ಪರಿಕ್ ಜೊತೆ ಹಾರ್ದಿಕ್‌ ಪಟೇಲ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು