ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಿಂದ ಹೊರಟಿದ್ದ ಬಸ್- ಲಾರಿ ಡಿಕ್ಕಿ: ಐವರು ಮಹಿಳೆಯರು ಸೇರಿ 20 ಜನ ಸಾವು

Last Updated 20 ಫೆಬ್ರುವರಿ 2020, 10:13 IST
ಅಕ್ಷರ ಗಾತ್ರ

ಚೆನ್ನೈ: ಬೆಂಗಳೂರಿನಿಂದ ಹೊರಟಿದ್ದ ಕೇರಳ ರಾಜ್ಯ ಸರ್ಕಾರಿ ಬಸ್‌ಗೆಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆಸುಮಾರು 20 ಜನರು ಮೃತಪಟ್ಟಿರುವ ಘಟನೆ ಗುರುವಾರ ತಮಿಳುನಾಡಿನ ತಿರ್ಪೂರು ಜಿಲ್ಲೆಯಅವಿನಾಶಿ ಪಟ್ಟಣದ ಬಳಿ ನಡೆದಿದೆ.

ಬಸ್ ಬೆಂಗಳೂರಿನಿಂದ ಕೇರಳದಎರ್ನಾಕುಳಂಗೆತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದು, ಕೊಯಮತ್ತೂರು-ಸೇಲಂಹೆದ್ದಾರಿಯಲ್ಲಿ ಮುಂಜಾನೆ 4.30ರ ಸುಮಾರಿಗೆ ಅಪಘಾತನಡೆದಿದೆ. ಬಸ್ಸಿನಲ್ಲಿ 48 ಪ್ರಯಾಣಿಕರಿದ್ದರು. ಅದರಲ್ಲಿ 19 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎದುರಿನಿಂದ ಬರುತ್ತಿದ್ದ ಲಾರಿಯ ಟೈಯರ್ ಸ್ಫೋಟಗೊಂಡಿದ್ದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ವೋಲ್ವೊ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿರ್ಪೂರು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐನೊಂದಿಗೆ ಮಾತನಾಡಿದ ಅವಿನಾಶಿಯ ಉಪ ತಹಶೀಲ್ದಾರ್,14 ಜನ ಪುರುಷರು ಮತ್ತು 5 ಜನ ಮಹಿಳೆಯರು ಕೇರಳ ರಾಜ್ಯದ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಅಪಘಾತಕ್ಕೀಡಾದವರಿಗೆ ತುರ್ತು ವೈದ್ಯಕೀಯ ಸೌಲಭ್ಯ ನೀಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಾಲಕ್ಕಾಡ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಮೃತರನ್ನು ಗುರುತಿಸುವ ಕಾರ್ಯವಿಧಾನಗಳು ಪ್ರಗತಿಯಲ್ಲಿವೆ ಎಂದು ಕೇರಳ ಮುಖ್ಯಮಂತ್ರಿ ಕಚೇರಿ (ಸಿಎಂಒ) ತಿಳಿಸಿದೆ.

ಡಿಕ್ಕಿಯ ರಭಸಕ್ಕೆ ಬಸ್ಸಿನ ಒಂದು ಮಗ್ಗುಲು ಸಂಪೂರ್ಣ ನಜ್ಜುಗುಜ್ಜಾಗಿದೆ ಮತ್ತು ಭೀಕರ ಅಪಘಾತದ ಚಿತ್ರಗಳನ್ನುಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನರು ಶೇರ್ ಮಾಡುತ್ತಿದ್ದಾರೆ.

ಸದ್ಯ 20 ಮೃತದೇಹಗಳನ್ನುತಿರ್ಪೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಐವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಅಪಘಾತದ ಬಗ್ಗೆ ಯಾವುದೇ ಮಾಹಿತಿಗಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸ್ನೇಹಿತರು ಮತ್ತು ಸಂಬಂಧಿಕರಿಗಾಗಿ ಸಹಾಯವಾಣಿಯನ್ನು ತೆರೆಯಲಾಗಿದ್ದು, (0) 7708331194 ಸಂಖ್ಯೆಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಕೆ. ವಿಜಯ್ ತಿಳಿಸಿದ್ದಾರೆ.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 48 ಜನರಲ್ಲಿ ಬಹುತೇಕರು ಕೇರಳದವರು ಎಂದು ತಿಳಿದುಬಂದಿದೆ.

ರಿಸರ್ವೇಷನ್ ಚಾರ್ಟ್‌ನಲ್ಲಿದ್ದ ಬಸ್ ಪ್ರಯಾಣಿಕರ ಹೆಸರುಗಳು ಇಂತಿವೆ

ಹೆಸರು ಇಳಿಯುವ ಸ್ಥಳ
ಐಶ್ವರ್ಯಾ ಎರ್ನಾಕುಳಂ
ಗೋಪಿಕಾ ಟಿ.ಜಿ ಎರ್ನಾಕುಳಂ
ಕರಿಶ್ಮಾ ಕೆ ಎರ್ನಾಕುಳಂ
ಪ್ರವೀಣ್ ಎಂ.ವಿ ಎರ್ನಾಕುಳಂ
ನಸೀಫ್ ಮುಹಮ್ಮದ್ ತ್ರಿಶ್ಶೂರ್
ಎಂ.ಸಿ ಮ್ಯಾಥ್ಯೂ ಎರ್ನಾಕುಳಂ
ಸಂತೋಷ್ ಕುಮಾರ್ ಕೆ ಪಾಲಕ್ಕಾಡ್
ತಂಗಚ್ಚನ್ ಕೆ.ಎ ಎರ್ನಾಕುಳಂ
ರಾಗೇಶ್ ಪಾಲಕ್ಕಾಡ್
ಆರ್ ದೇವಿ ದುರ್ಗಾ ಎರ್ನಾಕುಳಂ
ಜೋಫಿ ಪೌಲ್ ಸಿ ತ್ರಿಶ್ಶೂರ್
ಅಲನ್ ಸನ್ನಿ ತ್ರಿಶ್ಶೂರ್
ಪ್ರತೀಶ್ ಕುಮಾರ್ ಪಾಲಕ್ಕಾಡ್
ಸನೂಪ್ ಎರ್ನಾಕುಳಂ
ರೋಸ್ಸಿ ತ್ರಿಶ್ಶೂರ್
ಸೋನಾ ಸನ್ನಿ ತ್ರಿಶ್ಶೂರ್
ಕಿರಣ್ ಕುಮಾರ್ ಎಂಎಸ್ ತ್ರಿಶ್ಶೂರ್
ಮಾನಸಿ ಮಣಿಕಂಠನ್ ಎರ್ನಾಕುಳಂ
ಜೋರ್ಡನ್ ಪಿ ಸೇವ್ಯರ್ ಎರ್ನಾಕುಳಂ
ಅನು ಮತ್ತಾಯಿ ಎರ್ನಾಕುಳಂ
ಹನೀಶ್ ತ್ರಿಶ್ಶೂರ್
ಜಿಸ್‌ಮೋನ್ ಶಾಜು ಎರ್ನಾಕುಳಂ
ಮಧುಸೂದನ ವರ್ಮಾ ತ್ರಿಶ್ಶೂರ್
ಅನ್ ಮೇರಿ ಎರ್ನಾಕುಳಂ
ಅನು ಕೆ.ವಿ ತ್ರಿಶ್ಶೂರ್
ಶಿವ ಕುಮಾರ್ ಪಾಲಕ್ಕಾಡ್
ಬಿನ್ಸಿ ಇಗ್ನಿ ಎರ್ನಾಕುಳಂ
ಯೇಸುದಾಸ್ ಕೆ.ಡಿ ಎರ್ನಾಕುಳಂ
ಜಿಜೇಶ್ ಮೋಹನ್ ದಾಸ್ ತ್ರಿಶ್ಶೂರ್
ಶಿವಶಂಕರ್ ಪಿ ಎರ್ನಾಕುಳಂ
ಜೋಸುಕುಟ್ಟಿ ಜೋಸ್ ಎರ್ನಾಕುಳಂ
ಅಜಯ್ ಸಂತೋಷ್ ತ್ರಿಶ್ಶೂರ್
ರಾಮಚಂದ್ರನ್ ತ್ರಿಶ್ಶೂರ್
ಮಾರಿಯಪ್ಪನ್ ತ್ರಿಶ್ಶೂರ್
ಇಗ್ನೇಶಿಯಸ್ ಥಾಮಸ್ ತ್ರಿಶ್ಶೂರ್
ರೋಸ್ ಸೇಟ್ ಎರ್ನಾಕುಳಂ
ಅಲನ್ ಚಾರ್ಲ್ಸ್ ಎರ್ನಾಕುಳಂ
ವಿನೋದ್ ತ್ರಿಶ್ಶೂರ್
ಎಸ್.ಎ ಮಲವಾದ್ ಎರ್ನಾಕುಳಂ
ನಿಬಿನ್ ಬೇಬಿ ಎರ್ನಾಕುಳಂ
ಡಮನ್ಸಿ ರೆಬೆರಾ ಎರ್ನಾಕುಳಂ
ಕ್ರಿಸ್ಟೊ ಚಿರಕ್ಕೇಕಾರನ್ ಎರ್ನಾಕುಳಂ
ಅಖಿಲ್ ತ್ರಿಶ್ಶೂರ್
ಶ್ರೀಲಕ್ಷ್ಮಿ ಮೆನನ್ ತ್ರಿಶ್ಶೂರ್
ಇಗ್ನಿ ರಾಫೇಲ್ ಎರ್ನಾಕುಳಂ
ಬಿನು ಬೈಜು ಎರ್ನಾಕುಳಂ
ಜೆಮಿನ್ ಜಾರ್ಜ್ ಜೋಸ್ ಎರ್ನಾಕುಳಂ
ಥಾಮ್ಸನ್ ಡೇವಿಸ್ ತ್ರಿಶ್ಶೂರ್

ಪ್ರಯಾಣಿಕರ ಪೈಕಿಜೆಮಿನ್ ಜಾರ್ಜ್ ಜೋಸ್, ಅಲನ್ ಚಾರ್ಲ್ಸ್ , ಕರಿಶ್ಮಾ ಕೆ , ಅಜಯ್ ಸಂತೋಷ್, ಕ್ರಿಸ್ಟೊ ಚಿರಕ್ಕೇಕರನ್ ಸುರಕ್ಷಿತರಾಗಿದ್ದಾರೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT