ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವೈಎಫ್‌ಐ ಅಧ್ಯಕ್ಷ ಮೊಹಮ್ಮದ್ ರಿಯಾಜ್‌ ಜೊತೆಗೆ ಪಿಣರಾಯಿ ವಿಜಯನ್‌ ಪುತ್ರಿ ವಿವಾಹ

Last Updated 15 ಜೂನ್ 2020, 8:04 IST
ಅಕ್ಷರ ಗಾತ್ರ

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ. ವೀಣಾ ಮತ್ತು ಡೆಮಕ್ರಟಿಕ್‌ ಯೂತ್‌ ಫೆಡರೇಷನ್‌(ಡಿವೈಎಫ್‌ಐ)ನ ರಾಷ್ಟ್ರ ಘಟಕದ ಅಧ್ಯಕ್ಷ ಮೊಹಮ್ಮದ್‌ ರಿಯಾಜ್‌ ಅವರ ವಿವಾಹ ಸೋಮವಾರ ತಿರುವನಂತಪುರದಲ್ಲಿ ನೆರವೇರಿತು.

ಪಿಣರಾಯಿ ವಿಜಯನ್‌ ಅವರ ನಿವಾಸ, ತಿರುವನಂತಪುರದ ‘ಕ್ಲಿಫ್‌ ಹೌಸ್‌’ನಲ್ಲಿ ಬೆಳಗ್ಗೆ 10.30ರಲ್ಲಿ ಅತ್ಯಂತ ಸರಳವಾಗಿ ಶುಭಸಮಾರಂಭ ನಡೆಯಿತು. ಪಿಣರಾಯಿ ವಿಜಯನ್‌ ಮತ್ತು ಮೊಹಮ್ಮದ್‌ ರಿಯಾಜ್‌ ಅವರ ಕೆಲವೇ ಕುಟುಂಬಸ್ಥರು, ಸ್ನೇಹಿತರು ಇದರಲ್ಲಿ ಪಾಲ್ಗೊಂಡಿದ್ದರು. ಕೋವಿಡ್‌–19 ಮಾರ್ಗಸೂಚಿಗಳ ಅನ್ವಯ 50ಕ್ಕಿಂತಲೂ ಕಡಿಮೆ ಮಂದಿ ವಿವಾಹಕ್ಕೆ ಸಾಕ್ಷಿಯಾದರು.
ವೀಣಾ ಅವರು ಬೆಂಗಳೂರಿನ ‘ಎಕ್ಸೊಲೋಜಿಕಲ್‌ ಸೊಲ್ಯೂಷನ್‌ ಪ್ರೈವೆಟ್‌ ಲಿಮಿಟೆಡ್‌’ ಎಂಬ ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ. ಇದಕ್ಕೂ ಮೊದಲು ಅವರು ಪ್ರತಿಷ್ಠಿತ ‘ಒರಾಕಲ್‌’ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು.

ರಿಯಾಜ್‌ ಅವರು ಸಿಪಿಐ(ಎಂ)ನ ಯುವ ಘಟಕ, ಡಿವೈಎಫ್‌ಐರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ. 2009ರ ಲೋಕಸಭೆ ಚುನಾವಣೆಯಲ್ಲಿ ಕೋಯಿಕ್ಕೋಡ್‌ ಲೋಕಸಭೆಯಿಂದ ಅವರು ಸ್ಪರ್ಧಿಸಿದ್ದರಾದರೂ, ಕೇವಲ 838 ಮತಗಳ ಅಂತರದಿಂದ ಕಾಂಗ್ರೆಸ್‌ನ ಎಂ.ಕೆ ರಾಘವನ್‌ ಅವರ ವಿರುದ್ಧ ಸೋತಿದ್ದರು. ರಿಯಾಜ್‌, ಕೇರಳದ ಐಎಎಸ್‌ ಅಧಿಕಾರಿ ಪಿ.ಎಂ ಅಬ್ದುಲ್‌ ಖಾದರ್‌ ಮತ್ತು ಕೆ.ಎಂ ಆಯೆಷಾ ಬಿ ಅವರ ಪುತ್ರ.

ಟಿ. ವೀಣಾ ಮತ್ತು ರಿಯಾಜ್‌ ಅವರಿಬ್ಬರಿಗೂ ಇದು ಎರಡನೇ ಮದುವೆ. ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಈ ಮದುವೆ ಜರುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT