ಪ್ರಧಾನಿ ಮೋದಿ ರಾಜಧರ್ಮ ಪಾಲಿಸುತ್ತಿಲ್ಲ : ಚಂದ್ರಬಾಬು ನಾಯ್ಡು 

7

ಪ್ರಧಾನಿ ಮೋದಿ ರಾಜಧರ್ಮ ಪಾಲಿಸುತ್ತಿಲ್ಲ : ಚಂದ್ರಬಾಬು ನಾಯ್ಡು 

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಚಂದ್ರಬಾಬು ನಾಯ್ಡು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದಿರುವುದರಿಂದ ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ (ಟಿಡಿಪಿ), ಎನ್‍ಡಿಎ ಸರ್ಕಾರದಿಂದ ಬೆಂಬಲ ಹಿಂಪಡೆದಿತ್ತು.

ಇದನ್ನೂ ಓದಿ: ಮೋದಿಯನ್ನು ಜಶೋದಾ ಪತಿ ಎನ್ನಬಹುದೇ: ನಾಯ್ಡು ಪ್ರಶ್ನೆ

ನಮಗೆ ನ್ಯಾಯಬೇಕು. ನಾವು ಈ ದೇಶದ ಭಾಗವಾಗಿದ್ದೇವೆ. ನಮಗೆ ಬೆಂಬಲ ನೀಡಬೇಕೆಂದು ರಾಷ್ಟ್ರೀಯ ಮಾಧ್ಯಮಗಳಿಗೆ ನಾವು ಮನವಿ ಮಾಡುತ್ತಿದ್ದೇವೆ. ಮೋದಿ ರಾಜಧರ್ಮವನ್ನು ಪಾಲಿಸದೇ ಇರುವಾಗ ಅದರ ಬಗ್ಗೆ ನೆನಪಿಸುವುದು ನಮ್ಮ ಕರ್ತವ್ಯ. ಕೇಂದ್ರ ಸರ್ಕಾರದಿಂದಾಗಿ ನಾವು ತೊಂದರೆ ಅನುಭವಿಸುತ್ತಿದ್ದೇವೆ. ದೇಶವನ್ನು ಒಗ್ಗೂಡಿಸಲು ನಾವಿಲ್ಲಿ ಸೇರಿದ್ದೇವೆ. ಬಿಜೆಪಿ ದೇಶವನ್ನು ಒಡೆಯುತ್ತಿದೆ ಎಂದು ಉಪವಾಸ ಸತ್ಯಾಗ್ರಹ ಆರಂಭಿಸಿದ ನಾಯ್ಡು ಹೇಳಿದ್ದಾರೆ.

ಇದನ್ನೂ ಓದಿ:  ವಿಶೇಷ ಸ್ಥಾನಮಾನಕ್ಕೆ ಆಗ್ರಹ: ಚಂದ್ರಬಾಬು ನಾಯ್ಡು ಉಪವಾಸ ಸತ್ಯಾಗ್ರಹ

ನನ್ನ ವಿರುದ್ಧ ವೈಯಕ್ತಿಕ ದಾಳಿ ಮಾಡಲು ಸಮಯ ಬಳಸುವ ಮೋದಿ, ಭರವಸೆಗಳನ್ನು ಮರೆತಿದ್ದಾರೆ. ಪ್ರಧಾನಿಯೊಬ್ಬರು ಈ ರೀತಿ ವೈಯಕ್ತಿಕ ದಾಳಿ ಮಾಡುತ್ತಿರುವುದು ತರವಲ್ಲ. ನೀವು ನನ್ನ ಕೆಲಸವನ್ನು ಟೀಕಿಸಬಹುದು ಆದರೆ ವೈಯಕ್ತಿಕ ವಿಷಯಗಳನ್ನಲ್ಲ.
ನೀವು ನಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಅದನು ಹೇಗೆ ಈಡೇರಿಸಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ. ಇದು ಆಂಧ್ರ ಪ್ರದೇಶದ ಜನರ ಆತ್ಮ ಗೌರವದ ವಿಷಯ. ನಮ್ಮ ಆತ್ಮ ಗೌರವಕ್ಕೆ ಧಕ್ಕೆ ಆದರೆ ನಾವು ಅದನ್ನು ಸಹಿಸುವುದಿಲ್ಲ. ವೈಯಕ್ತಿಕ ದಾಳಿ ನಿಲ್ಲಿಸಿ ಎಂದು ನಾವು ಈ ಸರ್ಕಾರಕ್ಕೆ, ಅದರಲ್ಲೂ ಪ್ರಧಾನಿಯವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ನಾಯ್ಡು ಮೋದಿ ವಿರುದ್ದ ಗುಡುಗಿದ್ದಾರೆ.

ಇದನ್ನೂ ಓದಿ:  ಮೋದಿಗೆ ಕುಟುಂಬ ವ್ಯವಸ್ಥೆ ಬಗ್ಗೆ ಗೌರವ ಇದೆಯಾ?: ಚಂದ್ರಬಾಬು ನಾಯ್ಡು ವಾಗ್ದಾಳಿ

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲು ನಾವಿಲ್ಲಿಗೆ ಬಂದಿದ್ದೇವೆ. ಈ ಧರಣಿಗೆ ಮುನ್ನ ನಿನ್ನೆ ಪ್ರಧಾನಿ ಗಂಟೂರಿಗೆ ಭೇಟಿ ನೀಡಿದ್ದರು. ಅದರ ಅಗತ್ಯವೇನಿತ್ತು? ಎಂದು ನಾಯ್ಡು ಪ್ರಶ್ನಿಸಿದ್ದಾರೆ.
 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 9

  Angry

Comments:

0 comments

Write the first review for this !