ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಯುವಕ- ಶ್ರೀಲಂಕಾ ಯುವತಿಯ ಪ್ರೇಮ ಪರಿಣಯಕ್ಕೆ ಕಾರಣವಾಗಿದ್ದು ಮೋದಿ ಟ್ವೀಟ್

Last Updated 13 ಫೆಬ್ರುವರಿ 2019, 11:33 IST
ಅಕ್ಷರ ಗಾತ್ರ

ಭೋಪಾಲ್: ಶ್ರೀಲಂಕಾದ ಯುವತಿ ಹಂಸಿನಿ ಎದೀರಿಸಿಂಘೆ ಮತ್ತು ಮಧ್ಯ ಪ್ರದೇಶದ ಯುವಕ ಗೋವಿಂದ್ ಪ್ರಕಾಶ್ ಮದುವೆ ಫೆಬ್ರುವರಿ 10 ರಂದು ಮಂದಸೋರ್‌ನಕುಚೋರ್ದ್ ಎಂಬ ಸಣ್ಣ ಗ್ರಾಮದಲ್ಲಿ ನಡೆದಿದೆ.ಇವರದ್ದು ಪ್ರೇಮ ವಿವಾಹ. ಈ ಪ್ರೇಮ ಪರಿಣಯಕ್ಕೆ ಕಾರಣವಾಗಿದ್ದು ಪ್ರಧಾನಿ ಮೋದಿಯವರ ಟ್ವೀಟ್!

2015 ರಲ್ಲಿ ಮೋದಿಯವರ ಟ್ವೀಟ್‍ವೊಂದನ್ನುಗೋವಿಂದ್ ಲೈಕ್ ಮಾಡಿದ್ದರು. ಇದೇ ಟ್ವೀಟ್‍ನ್ನು ಹಂಸಿನಿಯೂ ಲೈಕ್ ಮಾಡಿದಾಗ ಆಕೆ ಯಾರು ಎಂದು ಗೋವಿಂದ್ ಆನ್‍ಲೈನ್‍ನಲ್ಲಿ ಸರ್ಚ್ ಮಾಡಿದ್ದರು. ಹಂಸಿನಿಯನ್ನು ಪತ್ತೆ ಹಚ್ಚಿದ ಗೋವಿಂದ್ ಆಕೆಯೊಂದಿಗೆ ಚಾಟ್ ಮಾಡಿ ಗೆಳೆತನ ಬೆಳೆಸಿಕೊಂಡರು.ಗೆಳೆತನ ಪ್ರೇಮಕ್ಕೆ ತಿರುಗಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

2017ರಲ್ಲಿ ಹಂಸಿನಿ ಭಾರತಕ್ಕೆ ಬಂದು ಗೋವಿಂದ್ ಅವರು ಕುಟುಂಬವನ್ನು ಭೇಟಿ ಮಾಡಿದ್ದರು.ಆ ಹೊತ್ತಲ್ಲಿ ಗೋವಿಂದ್‍‍ಗೆ ಇಂಜಿನಿಯರ್ ಪದವಿ ಪೂರ್ಣಗೊಳಿಸಬೇಕಿತ್ತು.ಇತ್ತ ಹಂಸಿನಿ ಭಾರತದಲ್ಲಿ ಫಿಸಿಯೋಥೆರಪಿ ಕೋರ್ಸ್ ಗೆ ಸೇರಲು ಕುಟುಂಬದವರ ಒಪ್ಪಿಗೆ ಪಡೆದು ಬಂದೇ ಬಿಟ್ಟರು.

ನಂತರ ಇಬ್ಬರ ಮನೆಯಲ್ಲಿಯೂ ಪ್ರೀತಿಯ ವಿಚಾರವನ್ನು ತಿಳಿಸಿ, ಮದುವೆಗೆ ಮನೆಯವರನ್ನೂ ಒಪ್ಪಿಸಿದರು. ಬೌದ್ದ ಧರ್ಮದ ಅನುಯಾಯಿಗಳಾದ ಹಂಸಿನಿ ಕುಟಂಬ ಗೋವಿಂದ್ ಕುಟುಂಬದವರೊಂದಿಗೆ ಮಾತನಾಡಿ ಮದುವೆ ನಿಶ್ಚಯವನ್ನೂಮಾಡಿದರು.
ಹಂಸಿನಿ ಕಡೆಯಿಂದ 15 ಮಂದಿ ಕುಟುಂಬ ಸದಸ್ಯರು ಮಧ್ಯ ಪ್ರದೇಶದಲ್ಲಿ ನಡೆದ ಮದುವೆಯ್ಲಿ ಭಾಗಿಯಾಗಿದ್ದರು, ಹಿಂದೂ ಸಂಪ್ರದಾಯದಂತೆ ಈ ವಿವಾಹ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT