ಬುಧವಾರ, ಫೆಬ್ರವರಿ 19, 2020
28 °C

ಎಚ್‌ಡಿಐಎಲ್‌ ಆಸ್ತಿ ಮಾರಾಟ: ಹೈಕೋರ್ಟ್ ಆದೇಶಕ್ಕೆ ‘ಸುಪ್ರೀಂ’ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಂಜಾಬ್‌– ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್‌ನ (ಪಿಎಂಸಿ) ಸಾಲ ಮರುಪಾವತಿಗಾಗಿ ಹೌಸಿಂಗ್‌ ಡೆವಲೆಪ್‌ಮೆಂಟ್‌ ಇನ್ಫಾಸ್ಟ್ರಕ್ಚರ್‌ ಲಿಮಿಟೆಡ್‌ನ (ಎಚ್‌ಡಿಐಎಲ್‌) ಆಸ್ತಿಗಳನ್ನು ಮಾರಾಟ ಮಾಡುವಂತೆ ನಿರ್ದೇಶನ ನೀಡಿದ್ದ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆನೀಡಿದೆ. 

ಹೈಕೋರ್ಟ್ ಆದೇಶವು ತಾನು ಕೈಗೊಂಡ ಕ್ರಮಗಳಿಗೆ ವಿರುದ್ಧವಾಗಿದೆ ಎಂದು ಆರ್‌ಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ, ಬಿ.ಆರ್‌.ಗವಾಯಿ ಮತ್ತು ಸೂರ್ಯಕಾಂತ್‌ ಅವರ ಪೀಠವು ಶುಕ್ರವಾರ ಅರ್ಜಿ ವಿಚಾರಣೆಯನ್ನು ನಡೆಸಿತು. ಖಾತೆದಾರರಿಗೆ ಬಾಕಿ ಪಾವತಿಸುವಂತೆ ಪಿಎಂಸಿ ಬ್ಯಾಂಕ್‌ಗೆ ಸೂಚಿಸಬೇಕು ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದ ವಕೀಲ ಸಾರೋಶ್ ದಾಮಾನಿಯಾ ಸೇರಿದಂತೆ ಹಲವು ಕಕ್ಷಿದಾರರಿಗೆ ಸುಪ್ರೀಂ ಕೋರ್ಟ್ ಇದೇ ವೇಳೆ ನೋಟಿಸ್‌ ನೀಡಿದೆ. 

ಪಿಎಂಸಿ ಬ್ಯಾಂಕ್‌ ಹಗರಣವು ₹6,500 ಕೋಟಿ ಹಗರಣವಾಗಿದೆ. ಬ್ಯಾಂಕ್‌ ಎಚ್‌ಡಿಐಎಲ್‌ಗೆ ₹4,335 ಕೋಟಿ ಸಾಲ ನೀಡಿದ್ದು, ಇದು ಸುಸ್ತಿದಾರ ಕಂಪನಿಯಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು