ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌‌ಡೌನ್: ನಿಯಮ ಉಲ್ಲಂಘಿಸಿದವರಿಗೆ ಆರತಿ ಎತ್ತಿದ ಉತ್ತರ ಪ್ರದೇಶದ ಪೊಲೀಸರು

Last Updated 22 ಏಪ್ರಿಲ್ 2020, 8:18 IST
ಅಕ್ಷರ ಗಾತ್ರ

ಕಾನ್ಪುರ (ಉತ್ತರಪ್ರದೇಶ): ಕೊರೊನಾ ಸೋಂಕು ತಡೆಗಾಗಿ ಜಾರಿಗೆ ತಂದಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸುವುದು ಸಾಮಾನ್ಯ. ಆದರೆ,ಉತ್ತರಪ್ರದೇಶದ ಪೊಲೀಸರು ನಿಯಮ ಉಲ್ಲಂಘಿಸಿದವರಿಗೆ ಆರತಿ ಎತ್ತಿ ಹಣ್ಣು ನೀಡಿ ಬುದ್ದಿ ಹೇಳಿರುವ ಪ್ರಸಂಗದ ವಿಡಿಯೋ ಈಗ ವೈರಲ್ ಆಗಿದೆ.

ಕಾನ್ಪುರದ ಕಿದ್ವಾಯಿ ನಗರದಲ್ಲಿ ನಿಯಮ ಉಲ್ಲಂಘಿಸಿದ ಏಳೆಂಟು ಮಂದಿ ಯುವಕರನ್ನು ಹಿಡಿದು ತಂದ ಪೊಲೀಸರು ರಸ್ತೆಯಲ್ಲಿ ನಿಲ್ಲಿಸಿ ಅವರಿಗೆ ಕರ್ಪೂರ, ವೀಳ್ಯೆದೆಲೆ, ಅರಿಶಿನ ಕುಂಕುಮಗಳಿಂದ ಆರತಿ ಎತ್ತಿದ್ದಾರೆ.ಅಲ್ಲದೆ, ಕೈಗೆ ಒಂದೊಂದು ಬಾಳೆ ಹಣ್ಣುಗಳನ್ನೂ ಕೊಟಿದ್ದಾರೆ.

ನಂತರ ಬುದ್ದಿ ಹೇಳಿರುವ ಪೊಲೀಸರು ಮೊದಲ ಬಾರಿ ಉಲ್ಲಂಘಿಸಿದರೆ ಇದೆಲ್ಲಾ ಮಾಡುತ್ತೇವೆ. ಎರಡನೆ ಬಾರಿ ಉಲ್ಲಂಘಿಸಿದರೆ, ಎರತಿ ಎತ್ತುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ವಿಶಿಷ್ಟ ರೀತಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT