ತಿರುವನಂತಪುರ: ರಾಷ್ಟ್ರಪತಿ ಭವನದ ಮಧ್ಯಪ್ರವೇಶದಿಂದಾಗಿ ಕೊನೆಗಳಿಗೆಯ ಗೊಂದಲದ ನಂತರ ವಿದೇಶಿ ಪ್ರಜೆಯ ವಿವಾಹ ಕಾರ್ಯಕ್ರಮ ಇಲ್ಲಿನ ತಾರಾ ಹೋಟೆಲ್‌ನಲ್ಲಿ ಮಂಗಳವಾರ ಸುಸೂತ್ರವಾಗಿ ನಡೆಯಿತು.

ಅಮೆರಿಕ ಪ್ರಜೆಯೊಬ್ಬರ ಮದುವೆ ಎಂಟು ತಿಂಗಳ ಹಿಂದೆ ನಿಗದಿಯಾಗಿದ್ದು, ಕೊಚ್ಚಿಯ ತಾರಾ ಹೋಟೆಲ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಎರಡು ದಿನದ ಹಿಂದೆ ಕರೆಮಾಡಿದ ಹೋಟೆಲ್ ಆಡಳಿತ, ರಾಷ್ವ್ರಪತಿ ಅವರ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ನಿಮ್ಮ ವಿವಾಹ ಸಮಾರಂಭದ ದಿನಾಂಕ ಬದಲಿಸಬೇಕು ಎಂಬ ಸೂಚನೆ ನೀಡಿದರು.

ಲಕ್ಷದ್ವೀಪಕ್ಕೆ ತೆರಳುತ್ತಿದ್ದ ರಾಷ್ಟ್ರಪತಿ ಇದೇ ಹೋಟೆಲ್‌ನಲ್ಲಿ ಒಂದು ದಿನ ತಂಗುವರಿದ್ದರು. ಸಂಘಟಕರ ಸೂಚನೆಯಿಂದ ವಿಚಲಿತರಾದ ಅಮೆರಿಕ ಪ್ರಜೆ, ತಮ್ಮ ಸ್ಥಿತಿ ಕುರಿತು ಟ್ವೀಟ್ ಮಾಡಿ, ಏನಾದರೂ ನೆರವಾಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಟ್ವೀಟ್ ಅನ್ನು ರಾಷ್ಟ್ರಪತಿ ಭವನ್‌ಗೆ ಟ್ಯಾಗ್ ಮಾಡಿದ್ದರು.

ಪ್ರತಿಕ್ರಿಯಿಸಿದ ರಾಷ್ಟ್ರಪತಿ ಭವನ, ತನ್ನ ಭದ್ರತಾ ಸಿಬ್ಬಂದಿಗೆ ಉದ್ದೇಶಿತ ವಿವಾಹ ಸಮಾರಂಭಕ್ಕೆ ಅಡ್ಡಿ ಪಡಿಸಬಾರದು ಎಂದು ಸೂಚಿಸಿತು. ಜೊತೆಗೆ ವಿವಾಹ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳ ಶುಭಾಶಯ ಸಂದೇಶವೂ ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.