ಭಾನುವಾರ, ಸೆಪ್ಟೆಂಬರ್ 20, 2020
22 °C
ಗುಂಪು ಹಲ್ಲೆ ತಡೆಗೆ ಉತ್ತರಪ್ರದೇಶ ಸರ್ಕಾರದ ಕ್ರಮ

ಗೋವು ಸಾಗಾಟಕ್ಕೆ ಪರವಾನಗಿ ಉತ್ತರಪ್ರದೇಶ ಸರ್ಕಾರ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ರಾಜ್ಯದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳನ್ನು ತಡೆಯಲು ಗೋಸಾಗಾಣಿಕೆಗೆ ಪರವಾನಗಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಉತ್ತರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.

‘ಗೋಸೇವಾ ಆಯೋಗ’ದ ಸಭೆಯಲ್ಲಿ ಸೋಮವಾರ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ‘ರಾಜ್ಯದೊಳಗೆ ಅಥವಾ ರಾಜ್ಯದಿಂದ ಹೊರಗೆ ಗೋವುಗಳನ್ನು ಸಾಗಾಣಿಕೆ ಮಾಡುವವರಿಗೆ ಗೋಸೇವಾ ಆಯೋಗವೇ ಪರವಾನಗಿ ನೀಡಬೇಕು’ ಎಂದರು.

‘ಪರವಾನಗಿ ಪಡೆದು ಗೋವುಗಳನ್ನು ಸಾಗಾಟ ಮಾಡುವವರಿಗೆ ಸುರಕ್ಷತೆಯ ಖಾತರಿಯನ್ನು ಸಹ ಆಯೋಗ ನೀಡಬೇಕು. ಇಂಥ ಕ್ರಮದಿಂದ ರಾಜ್ಯದಲ್ಲಿ ಗುಂಪು ಹಲ್ಲೆ ನಡೆಯುವುದನ್ನು ತಡೆಯಬಹುದು’ ಎಂದು ಮುಖ್ಯಮಂತ್ರಿ ಹೇಳಿದರು.

‘ಗೋ ಸಾಕಾಣಿಕೆ ಮಾಡುವವರಿಗೆ ಮೇವು ಹಾಗೂ ಇತರ ಅಗತ್ಯ ವಸ್ತುಗಳನ್ನು ಖರೀದಿಸಲು, ತಾವು ಸಾಕಿದ ಒಂದು ಹಸುವಿಗೆ ದಿನವೊಂದಕ್ಕೆ ₹ 30ರಂತೆ ಆರ್ಥಿಕ ನೆರವು ನೀಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ವಾಣಿಜ್ಯ ಉದ್ದೇಶಕ್ಕೆ ಗೋವುಗಳನ್ನು ಸಾಕುವವರಿಗೆ ಈ ಹಣ ನೀಡಬಾರದು’ ಎಂದು ಸೂಚಿಸಿದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನೇಕ ವಧಾಕೇಂದ್ರಗಳನ್ನು ಮುಚ್ಚಿದ್ದರಿಂದ ಮತ್ತು ಗೋ ಸಾಗಾಣಿಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರ ಪರಿಣಾಮವಾಗಿ ಉತ್ತರಪ್ರದೇಶದಲ್ಲಿ ಬೀಡಾಡಿ ದನಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅನೇಕ ಕಡೆಗಳಲ್ಲಿ ಬೀಡಾಡಿ ಹಸುಗಳು ರೈತರಿಗೆ ಸಮಸ್ಯೆ ಉಂಟುಮಾಡುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು