ಈ ಪ್ರಧಾನಿ ಕೆಲಸ ಮಾಡುವ ಪ್ರಧಾನಿ ಅಲ್ಲ, ಪ್ರಚಾರ ಬಯಸುವ ಪ್ರಧಾನಿ: ನಾಯ್ಡು 

7

ಈ ಪ್ರಧಾನಿ ಕೆಲಸ ಮಾಡುವ ಪ್ರಧಾನಿ ಅಲ್ಲ, ಪ್ರಚಾರ ಬಯಸುವ ಪ್ರಧಾನಿ: ನಾಯ್ಡು 

Published:
Updated:

ಕೋಲ್ಕತ್ತ: ಕೋಲ್ಕತ್ತದಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೇತೃತ್ವದ ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಈ ಪ್ರಧಾನಿ ಕೆಲಸ ಮಾಡುವ ಪ್ರಧಾನಿ ಅಲ್ಲ ಪ್ರಚಾರ ಬಯಸುವ ಪ್ರಧಾನಿ. ಜಿಎಸ್‍ಟಿ ಎಂಬುದು ಮೋಸ, ಆರ್ಥಿಕ ಅಭಿವೃದ್ಧಿ ನಿಂತುಹೋಗಿದೆ.ಈ ಸರ್ಕಾರ ಫೆಡರಲ್ ವ್ಯವಸ್ಥೆಯಲ್ಲಿ ಮೂಗು ತೂರಿಸುತ್ತಿದೆ ಎಂದಿದ್ದಾರೆ.

ನಮಗಿರುವುದು ಒಂದೇ ಗುರಿ. ಬಿಜೆಪಿ  ದೇಶವನ್ನು ವಿಭಜಿಸಿದೆ. ನಾವು ದೇಶವನ್ನು ಒಂದುಗೂಡಿಸುತ್ತಿದ್ದೇವೆ. ಈ ಸ್ಥಳಕ್ಕೆ ಐತಿಹಾಸಿಕ ಮಹತ್ವವಿದೆ. ದೇಶಕ್ಕೆ ಆಪತ್ತು ಒದಗಿದಾಗ ಈ ಮೈದಾನದಲ್ಲಿ ರ‍್ಯಾಲಿ ನಡೆಯುತ್ತದೆ  ಎಂದಿದ್ದಾರೆ ನಾಯ್ಡು.

2019ರಲ್ಲಿ ಮೋದಿ- ಶಾ ಅಧಿಕಾರಕ್ಕೆ ಬಂದರೆ ಅವರು ದೇಶ ನಿರ್ನಾಮ 

2019ರಲ್ಲಿ ಮೋದಿ- ಶಾ  ಮರಳಿ ಅಧಿಕಾರಕ್ಕೆ ಬಂದರೆ ಅವರು ಈ ದೇಶವನ್ನು ನಾಶ ಮಾಡುತ್ತಾರೆ. ಅವರು ದೇಶವನ್ನು ತುಂಡು ತುಂಡು ಮಾಡುತ್ತಾರೆ. ಹಿಟ್ಲರ್ ಮಾಡಿದಂತೆ ಅವರು ಮಾಡುತ್ತಾರೆ. ಅವರು ಸಂವಿಧಾನವನ್ನು ತಿದ್ದಿ, ಚುನಾವಣೆಯೇ ಇಲ್ಲದಂತೆ  ಮಾಡುತ್ತಾರೆ. ಅವರನ್ನು ಬುಡ ಸಮೇತ ಕಿತ್ತೊಗೆಯ ಬೇಕು.
ದೇಶದಲ್ಲಿರುವ ಮಹಿಳೆಯರು, ರೈತರು ಈ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ. ದಲಿತರನ್ನು ಜನರ ಗುಂಪು ಹೊಡೆದು ಕೊಲ್ಲುತ್ತಿದೆ. ಮುಸ್ಲಿಮರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು  ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ  ಓದಿಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು: ಯಶವಂತ್ ಸಿನ್ಹಾ 

ಉತ್ತರ ಪ್ರದೇಶದಿಂದ ಬಿಜೆಪಿಯನ್ನು ಕಿತ್ತು ಹಾಕಿ
ಉತ್ತರ ಪ್ರದೇಶದಿಂದ ಬಿಜೆಪಿಯನ್ನು ಕಿತ್ತು ಹಾಕಿ ನಾವು ಬಂಗಾಳದಲ್ಲಿ ಅದೇ ರೀತಿ ಮಾಡುತ್ತೇವೆ ಎಂದು ಅಖಿಲೇಶ್ ಯಾದವ್‌ಗೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

 ಹೊಸ ವರ್ಷದಲ್ಲಿ ಹೊಸ ಪ್ರಧಾನಿ
ಈ ಹೊಸ ವರ್ಷ, ನಮಗೆ ಹೊಸ ಪ್ರಧಾನಿ ಬೇಕು. ಜನರ ಆಯ್ಕೆ ಮಾಡಿದವರು ಪ್ರಧಾನಿಯಾಗುತ್ತಾರೆ ಎಂದು ಹೇಳಿದ ಅಖಿಲೇಶ್ ಯಾದವ್, ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವುದಿಲ್ಲ ಎಂದಿದ್ದಾರೆ. 

ಬಿಜೆಪಿ ಕರ್ನಾಟಕದಲ್ಲಿ ಕುದುರೆ ವ್ಯಾಪಾರವನ್ನು ಪ್ರೋತ್ಸಾಹಿಸುತ್ತಿದೆ: ಎಚ್‌ಡಿಕೆ
 ಬಿಜೆಪಿ ಕರ್ನಾಟಕದಲ್ಲಿ ಕುದುರೆ ವ್ಯಾಪಾರವನ್ನು ಪ್ರೋತ್ಸಾಹಿಸುತ್ತಿದೆ. ಶಾಸಕರನ್ನು ವಸ್ತುಗಳಂತೆ ಪರಿಗಣಿಸಲಾಗುತ್ತಿದೆ ಎಂದು ಕರ್ನಾಟಕದ  ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿಯವರಿಗೆ ಅಧಿಕಾರಶಾಹಿ ಧೋರಣೆ ಇದೆ. ಅವರ ಈ ಧೋರಣೆಯಿಂದಲೇ ಈ ದೇಶ ಹೀಗಾಗಿದೆ. ದೀದಿ ಈ ದೇಶಕ್ಕೆ ಮಾದರಿ ಆಗಿದ್ದಾರೆ. ದೀದಿಯಂತೆ ಸರಳ ಮತ್ತು ವಿನಮ್ರವಾಗಿರಬೇಕೆಂದು  ನನ್ನ ಅಪ್ಪ ಎಚ್.ಡಿ ದೇವೇಗೌಡರು ನನಗೆ ಕಲಿಸಿದ್ದಾರೆ.  
 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !