ಬುಧವಾರ, ಜನವರಿ 29, 2020
30 °C

ಉತ್ತರ ಪ್ರದೇಶದಲ್ಲಿ ಮಕ್ಕಳಿಗೆ ಕಳಪೆ ಊಟ: ಇದು ಸಾರೋ ನೀರೋ ಪ್ರಿಯಾಂಕ ಗಾಂಧಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರಕೂಟ (ಉತ್ತರ ಪ್ರದೇಶ): ಕಳಪೆ ಗುಣಮಟ್ಟದ ಆಹಾರವನ್ನು ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಧ್ರ ಅವರು ಯೋಗಿ ಅಧಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.

ಚಿತ್ರಕೂಟದಲ್ಲಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಪೋಟೊವನ್ನು ಟ್ವೀಟ್‌ ಮಾಡುವ ಮೂಲಕ ಯೋಗಿ ಅಧಿತ್ಯನಾಥ್ ಸರ್ಕಾರವನ್ನು ಟೀಕಿಸಿದ್ದಾರೆ.

ಮಕ್ಕಳಿಗೆ ಆರೋಗ್ಯಕರ ಆಹಾರ ನೀಡುವುದು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದರೆ ಇಲ್ಲಿ ಮಕ್ಕಳಿಗೆ ರೊಟ್ಟಿಯ ಜೊತೆಗೆ ಉಪ್ಪು, ಲೀಟರ್‌ ಹಾಲಿಗೆ ಬಕೇಟ್‌ ನೀರು ಹಾಗೂ ನೀರಿನಿಂದ ಕೂಡಿದ ಸಾರನ್ನು ನೀಡಲಾಗುತ್ತಿದೆ ಎಂದು ಪ್ರಿಯಾಂಕ ಗಾಂಧಿ ವಾಧ್ರ ಟೀಕಿಸಿದ್ದಾರೆ.

ಇಲ್ಲಿನ ಸರ್ಕಾರದ ಅಸಡ್ಡಯಿಂದಾಗಿ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಸ್ಥಳೀಯ ಪತ್ರಕರ್ತ ಸಾಯಿನಾಥನ್‌ ಎಂಬುವರು ಟ್ವೀಟ್‌ ಅನ್ನು ಪ್ರಿಯಾಂಕ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು