ಬಾಬರಿ ಮಸೀದಿ ಧ್ವಂಸ ಬಗ್ಗೆ ಹೆಮ್ಮೆ ಇದೆ: ಸಾಧ್ವಿ ಪ್ರಜ್ಞಾ

ಬುಧವಾರ, ಮೇ 22, 2019
29 °C

ಬಾಬರಿ ಮಸೀದಿ ಧ್ವಂಸ ಬಗ್ಗೆ ಹೆಮ್ಮೆ ಇದೆ: ಸಾಧ್ವಿ ಪ್ರಜ್ಞಾ

Published:
Updated:

ಭೋಪಾಲ್: 1992ರಲ್ಲಿ ಬಾಬರಿ ಮಸೀದಿ ಧ್ವಂಸ ಕಾರ್ಯದಲ್ಲಿ ತಾನು ಭಾಗಿಯಾಗಿದ್ದೆ ಎಂದು ಹೇಳಿದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಜಿಲ್ಲಾ ಚುನಾವಣಾ ಅಧಿಕಾರಿ ನೋಟಿಸ್ ನೀಡಿದ್ದಾರೆ.

ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಜ್ಞಾ, ನಾವು ರಾಮ ಮಂದಿರವನ್ನು ನಿರ್ಮಿಸುತ್ತೇವೆ ಮತ್ತು ಭವ್ಯವಾದ ಮಂದಿರವೊಂದನ್ನು ನಿರ್ಮಿಸುತ್ತೇವೆ. ನಾವು ಅಲ್ಲಿ ಆ ಕಟ್ಟಡವನ್ನು ಧ್ವಂಸ ಮಾಡಲು ಹೋಗಿದ್ದೆವು. ಅದನ್ನು ಧ್ವಂಸ ಮಾಡುವುದಕ್ಕಾಗಿ ನಾನು ಅದರ ಮೇಲೆ ಹತ್ತಿದ್ದೆ. ಆ ಬಗ್ಗೆ ನನಗೆ ಹೆಮ್ಮೆ ಇದೆ. ದೇವರು ನಮಗೆ ಶಕ್ತಿ ಕೊಟ್ಟಿದ್ದಾರೆ. ನಾವು ದೇಶದ ಮುಖದಲ್ಲಿದ್ದ ಕಲೆಯೊಂದನ್ನು ಅಳಿಸಿದ್ದೇವೆ ಎಂದಿದ್ದರು.

ಇದನ್ನೂ ಓದಿ:  ಹೇಮಂತ್‌ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ: ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ

ಭೋಪಾಲದ ಜಿಲ್ಲಾ ಚುನಾವಣಾ ಅಧಿಕಾರಿ ಸುಧಾಮ್ ಖಾಡೆ ಅವರು ಪ್ರಜ್ಞಾ ಅವರಿಗೆ ನೋಟಿಸ್ ನೀಡಿದ್ದು ಹೇಳಿಕೆ ಬಗ್ಗೆ ಒಂದು ದಿನದೊಳಗೆ ವಿವರಣೆ ನೀಡುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ:  ಹಿಂದೂಗಳು ಉಗ್ರರು ಎನ್ನುವವರಿಗೆ ಸಾಧ್ವಿ ಪ್ರತ್ಯುತ್ತರ ನೀಡಲಿದ್ದಾರೆ-ಪ್ರಧಾನಿ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 4

    Happy
  • 1

    Amused
  • 0

    Sad
  • 0

    Frustrated
  • 32

    Angry

Comments:

0 comments

Write the first review for this !