ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಹಿಟ್ಲರ್ ಎಂದ ರಾಹುಲ್‌ಗೆ ಮುಸ್ಸೋಲಿನಿ ಎಂದು ತಿರುಗೇಟು ನೀಡಿದ ಬಿಜೆಪಿ

ನಿರುದ್ಯೋಗ ಪ್ರಮಾಣ ಹೆಚ್ಚಳ
Last Updated 31 ಜನವರಿ 2019, 11:18 IST
ಅಕ್ಷರ ಗಾತ್ರ

ನವದೆಹಲಿ:ದೇಶದ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅತಿ ಹೆಚ್ಚಾಗಿರುವ ಬಗ್ಗೆ ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನುತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಫ್ಯೂರ್ (ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಎಂಬ ಅರ್ಥ ಕೊಡುವ ಶಬ್ದ)’ ಶಬ್ದ ಬಳಸಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿ ಅವರನ್ನು ಬಿಜೆಪಿಯು ಇಟಲಿಯ ಸರ್ವಾಧಿಕಾರಿ ಮುಸ್ಸೋಲಿನಿಗೆ ಹೋಲಿಸಿದೆ.

ನಿರುದ್ಯೋಗ ಪ್ರಮಾಣಕ್ಕೆ ಸಂಬಂಧಿಸಿದ ವರದಿಯ ಬಗ್ಗೆ ಪ್ರಸ್ತಾಪಿಸಿರುವ ರಾಹುಲ್, ‘ನೊಮೊ ಜಾಬ್ಸ್! ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದುಫ್ಯೂರ್ಭರವಸೆ ನೀಡಿದ್ದರು. 5 ವರ್ಷಗಳ ನಂತರ; ಉದ್ಯೋಗ ಸೃಷ್ಟಿಯ ವರದಿಯು ರಾಷ್ಟ್ರೀಯ ವಿಪತ್ತನ್ನು ಬಹಿರಂಗಪಡಿಸಿದೆ. ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಗರಿಷ್ಠವಾಗಿದೆ. 2017–18ರ ಹಣಕಾಸು ವರ್ಷವೊಂದರಲ್ಲೇ 6.5 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ.Time for NoMo2Go.’ ಎಂದು ಟ್ವೀಟ್ ಮಾಡಿದ್ದಾರೆ.

ನಿರುದ್ಯೋಗಕ್ಕೆ ಸಂಬಂಧಿಸಿದ ವರದಿ ಉಲ್ಲೇಖಿಸಿ ಮೋದಿ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ.#HowsTheJobs ಹ್ಯಾಷ್‌ಟ್ಯಾಗ್‌ನೊಂದಿಗೆ ಪ್ರಕಟಿಸಲಾಗಿರುವ ಸಂದೇಶಗಳು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿವೆ.

ಬಿಜೆಪಿ ತಿರುಗೇಟು

‘ರಾಹುಲ್ ಗಾಂಧಿಯವರಿಗೆ ಮುಸ್ಸೋಲಿನಿಯಂತೆ ದೂರದೃಷ್ಟಿಯ ಕೊರತೆ ಇರುವುದು ಇದರಿಂದ ಬಯಲಾಗಿದೆ. ವಿಷಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವರಿಗೆ ಸಮಸ್ಯೆ ಇದೆ. ಇಪಿಎಫ್‌ಒದ ನಿಜವಾದ ದತ್ತಾಂಶವು ಕಳೆದ 15 ತಿಂಗಳುಗಳಲ್ಲಿ ಉದ್ಯೋಗಾವಕಾಶ ಗಣನೀಯವಾಗಿ ಹೆಚ್ಚಾಗಿರುವುದನ್ನು ತೋರಿಸುತ್ತಿದೆ. ಈವರೆಗೂ ಸರಿಯಾದ ಕೆಲಸವನ್ನು ಮಾಡದ ವ್ಯಕ್ತಿ ಮತ್ತು ಉದ್ಯೋಗವಿಲ್ಲದ ವ್ಯಕ್ತಿ ಇಂತಹ ಸುಳ್ಳುಸುದ್ದಿ ಹರಡಬಲ್ಲ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT