ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರವನ್ನು ನಾವು ಪ್ರಶ್ನಿಸದಂತೆ ತಡೆಯಲಾಗುತ್ತಿದೆ: ರಾಹುಲ್ ಗಾಂಧಿ

Last Updated 7 ಫೆಬ್ರುವರಿ 2020, 13:16 IST
ಅಕ್ಷರ ಗಾತ್ರ

ನವದೆಹಲಿ: ಆಡಳಿತ ಪಕ್ಷದ ಸಂಸದರು ಸಂಸತ್ತಿನಲ್ಲಿ ಒಕ್ಕೊರಲಿನಿಂದ ಗದ್ದಲ ಎಬ್ಬಿಸಿ, ಒಟ್ಟಾಗಿ ಮುಗಿಬೀಳುವ ಮೂಲಕ ನರೇಂದ್ರ ಮೋದಿ ಅವರನ್ನು ಪ್ರಶ್ನಿಸದಂತೆತಡೆಯಲಾಗುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಅಲ್ಲದೆ, ಸಂಸತ್ತಿನ ಮಾಣಿಕ್ಯಂ ಟಾಗೂರ್ ಅವರು ಹಲ್ಲೆಗೆ ಮುಂದಾಗಿದ್ದಾರೆ ಅನ್ನೋದನ್ನು ವಿಡಿಯೋದಲ್ಲೇ ನೋಡಿ. ಅವರು ಸಚಿವ ಹರ್ಷವರ್ದನ್ ಅವರ ಮೇಲೆ ಹಲ್ಲೆಗೆ ಪ್ರಯತ್ನಿಸಲೇ ಇಲ್ಲ, ಆದರೂ ಬಿಜೆಪಿ ಸಂಸದರೇಗದ್ದಲ ಉಂಟು ಮಾಡಿದರು ಎಂದು ಆರೋಪಿಸಿದರು.

ನಾನು ಕೇರಳದ ವಯನಾಡ್‌ನಲ್ಲಿ ಮೆಡಿಕಲ್ ಕಾಲೇಜು ಇಲ್ಲ, ಅದಕ್ಕೆ ಸರ್ಕಾರದ ಕ್ರಮ ಏನು ಎಂಬ ಪ್ರಶ್ನೆಯನ್ನಷ್ಟೇ ಪ್ರಸ್ತಾಪಿಸಿದ್ದು, ಆದರೆ, ನನಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ. ಸಂಸತ್ತಿನಲ್ಲಿ ನಾನು ಮಾತನಾಡಬಾರದುಎಂಬುದು ಬಿಜೆಪಿ ಉದ್ದೇಶವಾಗಿದೆ. ನಾನು ಮಾತನಾಡುವುದನ್ನು ಬಿಜೆಪಿ ಇಷ್ಟಪಡುವುದಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ.

ಶುಕ್ರವಾರ ಸಂಸತ್ತಿನಲ್ಲಿ ನಡೆದ ಬೆಳವಣಿಗೆಗಳ ನಂತರ ಹೇಳಿಕೆ ನೀಡಿರುವ ರಾಹುಲ್ ಗಾಂಧಿ 'ಈ ದಿನ ಎಲ್ಲರೂ ಒಕ್ಕೊರಲಿನಿಂದ ಕೂಗುವ ಮೂಲಕ ಗದ್ದಲ ಎಬ್ಬಿಸಿ ಸರ್ಕಾರವನ್ನು ಪ್ರಶ್ನಿಸುವುದಕ್ಕೆ ತಡೆಯೊಡ್ಡಲಾಯಿತು. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ಯಾವುದೇ ಯೋಜನೆಗಳನ್ನು ಪ್ರಧಾನಿ ಮೋದಿ ನೀಡುತ್ತಿಲ್ಲ. ಈ ಕುರಿತು ಚರ್ಚೆಗೆ ಕರೆದರೆ ಅದನ್ನು ಬಿಜೆಪಿ ತಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ದೆಹಲಿ ಚುನಾವಣಾಪ್ರಚಾರ ಕಾರ್ಯಕ್ರಮದಲ್ಲಿ, ಪ್ರಧಾನಿ ಇದೇ ರೀತಿ ಭಾಷಣ ಮಾಡುತ್ತಿದ್ದರೆ ಬರುವ ಆರು ತಿಂಗಳ ನಂತರ ಪ್ರಧಾನಿ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಯುವಜನತೆ ಕೋಲು ಹಿಡಿದು ಅವರಿಗೆ ನಿರುದ್ಯೋಗ ಸಮಸ್ಯೆಯನ್ನು ಅರ್ಥಮಾಡಿಸುತ್ತಾರೆ ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಪ್ರಸ್ತಾಪಿಸಿದ ಆರೋಗ್ಯ ಸಚಿವ ಡಾ.ಹರ್ಷವರ್ದನ್ ಅವರು ರಾಹುಲ್ ಗಾಂಧಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದರು. ನಂತರ ಸಂಸತ್ತಿನಲ್ಲಿ ಗದ್ದಲ ಉಂಟಾಗಿ ಸಭೆಯನ್ನು ಮುಂದೂಡಲಾಯಿತು.
ಸಂಸತ್ತಿನಲ್ಲಿ ಹೇಳಿಕೆ ಓದುತ್ತಿದ್ದಂತೆ ಕಾಂಗ್ರೆಸ್ ಮಾಣಿಕ್ಯಂ ಟಾಗೂರ್ ಅವರು, ಸಚಿವ ಹರ್ಷವರ್ದನ್ ಅವರತ್ತ ಧಾವಿಸಿ ಬಂದರು. ಇದನ್ನು ಬಿಜೆಪಿ ಸಂಸದರು ತಡೆದರು. ಇದೇ ಘಟನೆಯನ್ನು ಪ್ರಸ್ತಾಪಿಸಿದ ಬಿಜೆಪಿಯ ಸಂಸದರಾದ ಜಗದಂಬಿಕಾ ಪಾಲ್ ಮಾಣಿಕ್ಯಂ ಟಾಗೂರ್ ಈ ರೀತಿ ಮಾಡಿರುವುದು ಖಂಡನೀಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT