ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಧರ್ಮ ಹೇಳಿಕೆ: ಕ್ಷಮೆ ಕೇಳುವಂತೆ ಜೋಶಿಗೆ ರಾಹುಲ್ ಗಾಂಧಿ ತಾಕೀತು

ಬ್ರಾಹ್ಮಣರಲ್ಲದ ಮೋದಿ, ಉಮಾಭಾರತಿ ಹಿಂದೂ ಧರ್ಮದ ಬಗ್ಗೆ ಮಾತನಾಡುವುದೇಕೆ?
Last Updated 23 ನವೆಂಬರ್ 2018, 9:00 IST
ಅಕ್ಷರ ಗಾತ್ರ

ನವದೆಹಲಿ: ಧರ್ಮದ ವಿಚಾರವಾಗಿ ಮೋದಿ ಸೇರಿದಂತೆ ಕೆಲವರನ್ನು ಹೀಗಳೆದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಸಿ.ಪಿ ಜೋಶಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೆಂಡಾಮಂಡಲರಾಗಿದ್ದಾರೆ.

ಸಿ.ಪಿ ಜೋಶಿ ಅವರು ರಾಜಸ್ಥಾನದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಬ್ರಾಹ್ಮಣರಲ್ಲದ ಪ್ರಧಾನಿ ನರೇಂದ್ರ ಮೋದಿ, ಉಮಾ ಭಾರತಿ, ಸಾದ್ವಿ (ರಿತಾಂಬರ) ಅವರಿಗೆ ಹಿಂದೂಧರ್ಮದ ಬಗ್ಗೆ ಏನು ತಿಳಿದಿದೆ? ಬ್ರಾಹ್ಮಣರು ಮಾತ್ರ ಹಿಂದೂಧರ್ಮದ ಕುರಿತಾಗಿ ಜ್ಞಾನ ಉಳ್ಳವರುಎಂದು ಹೇಳಿದ್ದರು.

ಜೋಶಿ ಅವರ ಹೇಳಿಕೆ ಖಂಡಿಸಿದ ರಾಹುಲ್, ಇವರ ಈ ಮಾತು ಕಾಂಗ್ರೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಪಕ್ಷದ ಮುಖಂಡರ ಈ ರೀತಿಯ ಹೇಳಿಕೆಗಳು ಸಮಾಜದ ವಿವಿಧ ವರ್ಗದ ಜನರಿಗೆ ನೋವನ್ನುಂಟು ಮಾಡುತ್ತದೆ. ಕಾಂಗ್ರೆಸ್‌ನ ನೀತಿ–ನಿಯಮಗಳು, ಕಾರ್ಯಕರ್ತರ ಚಟುವಟಿಕೆಯನ್ನು ಗೌರವಿಸಬೇಕು. ಜೋಶಿ ಮಾಡಿದ್ದು ದೊಡ್ಡ ತಪ್ಪು. ಹಾಗಾಗಿ ಅವರು ಖಂಡಿತವಾಗಿಯೂ ಕ್ಷಮೆಯಾಚಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT